See also 1farm
2farm ಹಾರ್ಮ್‍
ಸಕರ್ಮಕ ಕ್ರಿಯಾಪದ
  1. (ತೆರಿಗೆ, ಉದ್ಯೋಗ, ಮೊದಲಾದವುಗಳಿಂದ ಬರುವ ವರಮಾನವನ್ನು ಒಂದು ಗೊತ್ತಾದ ಮೊಬಲಗು ಕೊಟ್ಟು) ಗುತ್ತಿಗೆ ಹಿಡಿ; ಗುತ್ತಿಗೆಗೆ ತೆಗೆದುಕೊ.
  2. (ತೆರಿಗೆ, ಉದ್ಯೋಗ, ಮೊದಲಾದವುಗಳಿಂದ ಬರುವ ವರಮಾನವನ್ನು ವ್ಯಕ್ತಿಗೆ ಒಂದು ಗೊತ್ತಾದ ಮೊಬಲಗಿಗೆ) ಗುತ್ತಿಗೆಗೆ ಕೊಡು: farm out the rent collections ಬಾಡಿಗೆ ವಸೂಲಿಯನ್ನು ಗುತ್ತಿಗೆಗೆ ಕೊಡು.
  3. (ಕೆಲಸವನ್ನು) ಸಬ್‍ಕಂಟ್ರ್ಯಾಕ್ಟರ್‍ ಮೊದಲಾದವರಿಗೆ ವಹಿಸಿಕೊಡು.
  4. (ಕೂಲಿಯಾಳುಗಳನ್ನು) ಒಂದು ಗೊತ್ತಾದ ಮೊಬಲಗಿಗೆ ಸರಬರಾಯಿ ಮಾಡು; ಒಪ್ಪಂದದಂತೆ ಒದಗಿಸು; ಗುತ್ತಿಗೆ ಕೂಲಿಗಳನ್ನು ಒದಗಿಸು.
  5. (ವ್ಯಕ್ತಿಗೆ) ಕೂಲಿಕೆಲಸದ ಏರ್ಪಾಡುಮಾಡು; ಕೂಲಿವ್ಯವಸ್ಥೆ ಮಾಡು; ಕೂಲಿಕೆಲಸ ಕೊಡಿಸು.
  6. (ಮುಖ್ಯವಾಗಿ ಮಕ್ಕಳನ್ನು) ನಿಗದಿತ ಹಣಕ್ಕೆ ಸಾಕಿಸಲಹಲು – ಒಪ್ಪಂದ ಮಾಡಿಕೊ, ಕರಾರು ಮಾಡಿಕೊ, ಗೊತ್ತು ಮಾಡಿಕೊ.
  7. (ಜಈನನ್ನು) ಕೃಷಿ ಮಾಡು; ಬೇಸಾಯಮಾಡು; ಗೆಯ್ಯಿ; ಸಾಗುವಳಿಮಾಡು; ವ್ಯವಸಾಯಮಾಡು.
ಅಕರ್ಮಕ ಕ್ರಿಯಾಪದ

ಒಕ್ಕಲುತನ ಮಾಡು; ಆರಂಬಮಾಡು; ಉಳುಮೆಮಾಡು; ಸಾಗುವಳಿ ಮಾಡು; ಬೇಸಾಯ ಮಾಡು; ವ್ಯವಸಾಯ ಮಾಡು; ಆರಂಭಗಾರನಾಗು.

ಪದಗುಚ್ಛ

farm out = 2farm(2).