every ಎವ್ರಿ
ಗುಣವಾಚಕ
  1. ಪ್ರತಿ; ಪ್ರತಿಯೊಂದೂ; ಒಂದೊಂದೂ; ಒಬ್ಬೊಬ್ಬರೂ; ಎಲ್ಲ; ಎಲ್ಲರೂ: every word of it is false ಅದರ ಪ್ರತಿಯೊಂದು ಶಬ್ದವೂ ಸುಳ್ಳು. it engaged his every thought ಅವನ ಯೋಚನೆಯಲ್ಲವೂ ಅದರ ಮೇಲೇ ಇತ್ತು.
  2. (ಅನುಕ್ರಮವಾಗಿ, ಸರತಿಯ ಮೇಲೆ ಎನ್ನುವ ಅರ್ಥ ಸೂಚಿಸುವಾಗ) ಪ್ರತಿ; ಪ್ರತಿಯೊಂದು: he comes every day ಅವನು ಪ್ರತಿದಿನವೂ ಬರುತ್ತಾನೆ. he comes every other or second day ಅವನು ದಿನ ಬಿಟ್ಟು ದಿನ ಯಾ ಎರಡು ದಿನಕ್ಕೊಮ್ಮೆ ಬರುತ್ತಾನೆ: every three days ಮೂರು ದಿವಸಗಳಿಗೊಮ್ಮೆ. every third day ಪ್ರತಿ ಮೂರನೆಯ ದಿನ.
ನುಡಿಗಟ್ಟು
  1. every bit as much ಸಂಪೂರ್ಣವಾಗಿ.
  2. every day.
    1. ಪ್ರತಿದಿನ.
    2. ಬಹಳ ದಿನ; ಅನೇಕ ದಿನ.
  3. every last (ಅಶಿಷ್ಟ) ಯಾರನ್ನೂ ಯಾ ಯಾವುದನ್ನೂ ಬಿಡದೆ ಪ್ರತಿಯೊಬ್ಬನೂ ಯಾ ಪ್ರತಿಯೊಂದೂ.
  4. every now and again = ನುಡಿಗಟ್ಟು \((5)\).
  5. every now and then ಆಗಾಗ; ಆಗಿಂದಾಗ್ಗೆ; ಅಡಿಗಡಿಗೆ; ಬಾರಿಬಾರಿಗೂ.
  6. every so often = ನುಡಿಗಟ್ಟು \((5)\).
  7. every time
    1. ಯಾವಾಗಲಾದರೂ; ಎಂದಾದರೂ; -ಆಗೆಲ್ಲಾ; -ಆಗಲೆಲ್ಲಾ: every time I meet him, he tries to borrow money from me ನಾನು ಅವನನ್ನು ನೋಡಿದಾಗಲೆಲ್ಲಾ ನನ್ನನ್ನು ಸಾಲ ಕೇಳಲು ಪ್ರಯತ್ನಿಸುತ್ತಾನೆ.
    2. ಪ್ರತಿ ಸಲವೂ; ಯಾವಾಗಲೂ; ಸದಾ.
  8. every which way (ಅಮೆರಿಕನ್‍ ಪ್ರಯೋಗ)
    1. ಪ್ರತಿಯೊಂದು ದಿಕ್ಕಿನಲ್ಲೂ.
    2. ಅವ್ಯವಸ್ಥಿತವಾಗಿ; ಕ್ರಮರಹಿತವಾಗಿ.
  9. have every thing (ಆಡುಮಾತು) ಆಕರ್ಷಣೆ ಮೊದಲಾದ ಪ್ರತಿಯೊಂದೂ ಇರು; ಎಲ್ಲವೂ ಇರು; ಎಲ್ಲವನ್ನೂ ಹೊಂದಿರು.