See also 1east  3east
2east ಈಸ್ಟ್‍
ನಾಮವಾಚಕ
  1. ಮೂಡಲು; ಪೂರ್ವ (ದಿಕ್ಕು).
  2. (East) ಪ್ರಾಚ್ಯ; ಪೌರಸ್ತ್ಯ ಯಾ ಪೂರ್ವ ದೇಶಗಳು; ಯೂರೋಪಿಗೆ ಪೂರ್ವದಿಕ್ಕಿನಲ್ಲಿರುವ ದೇಶಗಳು.
  3. (ಚರ್ಚಿನ ಕಟ್ಟಡ ಪೂರ್ವಾಭಿಮುಖವಾಗಿರಲಿ, ಇಲ್ಲದಿರಲಿ) ಪೂಜಾವೇದಿಕೆಯಿರುವ ಚರ್ಚಿನ ತುದಿ, ಭಾಗ.
  4. (ದೇಶದ ಯಾ ಪಟ್ಟಣದ) ಪೂರ್ವಭಾಗ; ಮೂಡಲ ಭಾಗ.
  5. ಪೂರ್ವ ಯೂರೋಪಿನ ಕಮ್ಯುನಿಸ್ಟ್‍ ದೇಶಗಳು.
  6. (ಚರಿತ್ರೆ) ಅರ್ವಾಚೀನ ರೋಮನ್‍ ಸಾಮ್ರಾಜ್ಯದ ಪೂರ್ವಭಾಗ; ಪೂರ್ವ ರೋಮ್‍ ಸಾಮ್ರಾಜ್ಯ.
  7. ‘ಪೂರ್ವ’ (ವೆಂದು ಪರಿಗಣಿತವಾಗಿರುವ ಸ್ಥಾನದಲ್ಲಿ ಕುಳಿತುಕೊಳ್ಳುವ) ಇಸ್ಪೀಟು ಆಟಗಾರ.
ಪದಗುಚ್ಛ
  1. east by north ಪೂರ್ವಕ್ಕೂ ಪೂರ್ವ ಈಶಾನ್ಯಕ್ಕೂ ನಡುವಣ ದಿಕ್ಕು.
  2. east by south ಪೂರ್ವಕ್ಕೂ ಪೂರ್ವ ಆಗ್ನೇಯಕ್ಕೂ ನಡುವಣ ದಿಕ್ಕು.
  3. Far East ದೂರಪ್ರಾಚ್ಯ; ಚೀನಾ, ಜಪಾನ್‍, ಮೊದಲಾದ ದೇಶಗಳು.
  4. Middle East ಮಧ್ಯಪ್ರಾಚ್ಯ; ಮುಖ್ಯವಾಗಿ ಈಜಿಪ್ಟ್‍ನಿಂದ ಹಿಡಿದು ಇರಾನನ್ನೂ ಒಳಗೊಂಡ ದೇಶಗಳು.
  5. Near East ಸಮೀಪಪ್ರಾಚ್ಯ:
    1. = ಪದಗುಚ್ಛ \((4)\).
    2. (ಪ್ರಾಚೀನ ಪ್ರಯೋಗ) ತುರ್ಕಿ ಮತ್ತು ಬಾಲ್ಕನ್‍ ದೇಶಗಳು.
  6. the East (ಅಮೆರಿಕನ್‍ ಪ್ರಯೋಗ) ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಈಶಾನ್ಯ ಭಾಗ.