See also 1colour
2colour ಕಲರ್‍
ಸಕರ್ಮಕ ಕ್ರಿಯಾಪದ
  1. ಬಣ್ಣ ಕೊಡು.
  2. ಬಣ್ಣ–ಬಳಿ, ಹಚ್ಚು, ಹಾಕು, ಸವರು, ಲೇಪಿಸು.
  3. ನಿಜ ಸ್ಥಿತಿಯನ್ನು ಮರೆಮಾಡು; ಬಣ್ಣ ಕೊಡು; ಬೇರೆಯಾಗಿ ಕಾಣುವಂತೆ ಮಾಡು: in order to influence the jury, he coloured his account of what had happened ನ್ಯಾಯದರ್ಶಿಗಳ ಮೇಲೆ ಪ್ರಭಾವ ಬೀರಲು ಅವನು ನಡೆದ ಸಂಗತಿಯ ನಿರೂಪಣೆಗೆ ಬಣ್ಣ ಕೊಟ್ಟು ಹೇಳಿದ.
  4. (ರೂಪಕವಾಗಿ) ತಪ್ಪಾಗಿ–ನಿರೂಪಿಸು, ವರ್ಣಿಸು: highly coloured details ಬಹಳ ಬಣ್ಣ ಕೊಟ್ಟ ವಿವರಗಳು; ಅತಿಶಯಿಸಿದ ವಿವರಣೆಗಳು.
  5. ತನ್ನ ಬಣ್ಣವನ್ನೇ, ಛಾಯೆಯನ್ನೇ ನೀಡು; ಅದರ ಗುಣವನ್ನೇ ಆರೋಪಿಸು: a man’s motive colours his act ವ್ಯಕ್ತಿಯೊಬ್ಬನ ಉದ್ದೇಶ ಅವನ ಕ್ರಿಯೆಗೆ ಅದರ ಬಣ್ಣವನ್ನೇ ಕೊಡುತ್ತದೆ.
ಅಕರ್ಮಕ ಕ್ರಿಯಾಪದ
  1. (ಯಾವುದೇ) ಬಣ್ಣ ತಳೆ; ಬಣ್ಣವಾಗು; ಬಣ್ಣ ಪಡೆ.
  2. (ಮುಖದ ವಿಷಯದಲ್ಲಿ) ಬಣ್ಣ ಬದಲಾಯಿಸು; ಬಣ್ಣವೇರು; ಕೆಂಪೇರು; ಕೆಂಪಾಗು.
ಪದಗುಚ್ಛ
  1. coloured person (ವರ್ಣೀಯ ಇಲ್ಲವೆ ಶ್ವೇತ ಹಾಗೂ ವರ್ಣೀಯ ಮಾತಾಪಿತೃಗಳಿಂದ ಹುಟ್ಟಿದ) ಮಿಶ್ರವರ್ಣೀಯ; ಬೆರಕೆ.
  2. colour up = 2colour ಅಕರ್ಮಕ ಕ್ರಿಯಾಪದ \((2)\).