See also 2burst
1burst ಬರ್ಸ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ burst).

ಅಕರ್ಮಕ ಕ್ರಿಯಾಪದ

  1. (ಒಳಗಿನ ವಸ್ತುಗಳ ಹಿಗ್ಗಲಿಕೆ ಯಾ ಆಂತರಿಕ ಒತ್ತಡದಿಂದ ಕೋಶ ಮೊದಲಾದವು). ಸಿಡಿ; ಸಿಡಿದು ಚೂರಾಗು; ಸ್ಫೋಟಿಸು.
  2. ಒಡೆ; ಬಿರಿ; ಒಡೆದು ಹೋಗು.
  3. (ಉತ್ಸಾಹ, ಭಾವೋದ್ವೇಗ, ಮೊದಲಾದವುಗಳಿಂದ) ಬಿರಿ; ಒಡೆ; ಬಿರಿಯುವಂತಿರು: heart burst ಎದೆ ಒಡೆಯುತ್ತದೆ.
  4. (ರಭಸವಾಗಿ ಯಾ ಹಠಾತ್ತಾಗಿ, ಇದ್ದಕ್ಕಿದ್ದಂತೆ, ಏಕಾಏಕಿ – ಹೊರಕ್ಕೆ ಯಾ ಒಳಕ್ಕೆ) ನುಗ್ಗು: he burst into the room ಅವನು ಇದ್ದಕ್ಕಿದ್ದಂತೆ ರೂಮಿನೊಳಕ್ಕೆ ನುಗ್ಗಿದ.
  5. (ಮೊಗ್ಗು, ಮುಗುಳು) ಬಿರಿ; ಅರಳು.
  6. (ನೀರ್ಗುಳ್ಳೆ, ಕುರು) ಒಡೆ; ಬಿರಿ; ಸ್ಫೋಟಿಸು.
  7. (ಮೋಡ) ಬಿರುಮಳೆ ಸುರಿಸಿ ಚೆದುರಿಹೋಗು.
  8. (ರಭಸದಿಂದ) ತೆರೆದುಕೊ: door bursts open ಬಾಗಿಲು ದಡಾರನೆ ತೆರೆದುಕೊಂಡಿತು.
  9. ತುಂಬಿರು; ಭರ್ತಿಯಾಗಿರು; ತುಂಬಿ – ತುಳುಕು, ಬಿರಿ; ಬಿರಿದುಹೋಗುವಷ್ಟು ಭರ್ತಿಯಾಗಿರು: the granary is bursting with grain ಕಣಜ ಧಾನ್ಯದಿಂದ ತುಂಬಿ ತುಳುಕುತ್ತಿದೆ. he is bursting with pride ಅಹಂಕಾರದಿಂದ ಬೀಗಿ ಬಿರಿಯುತ್ತಿದ್ದಾನೆ.
  10. (ಕೋಪದಿಂದ) ಸಿಡಿ; ಸಿಡಿದುಬೀಳು.
  11. ಹಠಾತ್ತನೆ, ಏಕಾಏಕಿ – ಬರು, ಕಾಣಿಸಿಕೊ, ಗೋಚರವಾಗು: he burst upon the assembly ಅವನು ಸಭೆಯಲ್ಲಿ ಏಕಾಏಕಿ ಕಾಣಿಸಿಕೊಂಡ.
  12. (ಹಠಾತ್ತನೆ ಯಾ ತೀವ್ರವಾಗಿ ಭಾವಗಳನ್ನು) ಪ್ರಕಟಿಸು; ಪ್ರದರ್ಶಿಸು: burst into laughter ಹಠಾತ್ತನೆ ನಗಲು ಪ್ರಾರಂಭಿಸು. burst into tears ಇದ್ದಕ್ಕಿದ್ದಂತೆ ಜೋರಾಗಿ ಕಣ್ಣೀರು ಸುರಿಸಿ ಅಳು. burst into a tirade ಏಕಾಏಕಿ ಖಂಡಿಸಲು ತೊಡಗು.
ಸಕರ್ಮಕ ಕ್ರಿಯಾಪದ
  1. (ಕೋಶವನ್ನು) ಸಿಡಿಸು; ಸ್ಫೋಟಿಸು; ಸಿಡಿದುಹೋಗುವಂತೆ ಮಾಡು.
  2. ಒಡೆದು, ಭೇದಿಸಿಕೊಂಡು – ನುಗ್ಗು: river bursts the banks ನದಿಯು ದಡವನ್ನು ಭೇದಿಸಿಕೊಂಡು ನುಗ್ಗುತ್ತದೆ.
  3. (ಮೊಗ್ಗನ್ನು, ಮುಗುಳನ್ನು, ಗಾಳಿ ಮೊದಲಾದವು) ಬಿರಿಯಿಸು; ಅರಳಿಸು.
  4. (ಬಾಗಿಲನ್ನು) ರಭಸದಿಂದ ಯಾ ದಡಾರನೆ ತೆರೆ.
  5. (ರೂಪಕವಾಗಿ) (ಅಳ್ಳೆ, ರಕ್ತನಾಳ, ಮೊದಲಾದ ಅವಯವವನ್ನು) ಬಿರಿಯಿಸಿಕೊ; ಒಡೆಸಿಕೊ: in his excitement he burst a blood vessel ಉದ್ವೇಗದಲ್ಲಿ ಅವನು ರಕ್ತನಾಳ ಬಿರಿಯಿಸಿಕೊಂಡ. burst (one’s sides) with laughing ನಕ್ಕು ನಕ್ಕು – ಅಳ್ಳೆಬಿರಿ, ಪಕ್ಕೆಬಿರಿ.
ನುಡಿಗಟ್ಟು
  1. be bursting to ತವಕಿಸು; ತವಕಪಡು; ಆತುರದಿಂದಿರು: he was bursting to tell us the news ಅವನು ನಮಗೆ ಸುದ್ದಿ ತಿಳಿಸಲು ತವಕಪಡುತ್ತಿದ್ದ.
  2. burst forth = ನುಡಿಗಟ್ಟು \((7a)\).
  3. burst in
    1. ದುಡುಂ ಪ್ರವೇಶಿಸು; ಇದ್ದಕ್ಕಿದ್ದಂತೆ ಬರು.
    2. ರಭಸದಿಂದ ಒಳನುಗ್ಗು.
    3. (ಬಾಗಿಲಿನ ವಿಷಯದಲ್ಲಿ) ದಡಾರನೆ ತೆರೆ ಯಾ ತೆರೆದುಕೊ.
    4. ನಡುವೆ ಬರು; ಮಧ್ಯೆ ಪ್ರವೇಶಿಸು: burst in upon a conversation ಮಾತಿನ ನಡುವೆ ಬಾಯಿಹಾಕು.
  4. burst into ಥಟ್ಟನೆ ಹೊರಹೊಮ್ಮು; ಇದ್ದಕ್ಕಿದ್ದಂತೆ ಶುರುವಾಗು; ಏಕಾಏಕಿ ಪ್ರಾರಂಭಿಸು: burst into flames ಇದ್ದಕ್ಕಿದ್ದಂತೆ ಉರಿಯೇಳು. burst into tears, laughter, song, a run ಇದ್ದಕ್ಕಿದ್ದಂತೆ – ಕಣ್ಣೀರಿಡಲು, ನಗಲು, ಹಾಡಲು, ಓಡಲು ತೊಡಗು. burst into bloom, blossom (ಗಿಡಗಳ ವಿಷಯದಲ್ಲಿ) ಹೂ – ಬಿಡು, ತುಂಬು.
  5. burst one’s buttons with food (ಅಂಗಿಯ) ಗುಂಡಿ ಕಿತ್ತು ಹೋಗುವಂತೆ ತಿನ್ನು; ತಿಂದು ಹೊಟ್ಟೆ ಬಿರಿ.
  6. burst open the door ಒದ್ದು, ದಬ್ಬಿ, ಒಡೆದು – ಬಾಗಿಲು ತೆರೆ.
  7. burst out
    1. (ಕೋಪ, ಆಶ್ಚರ್ಯ, ಮೊದಲಾದವುಗಳಿಂದ) ಕಿರಿಚು; ಕೂಗು; ಉದ್ಗರಿಸು; ಉದ್ಗಾರ ತೆಗೆ; ಗಟ್ಟಿಯಾಗಿ ಮಾತಾಡಲು ತೊಡಗು.
    2. ಇದ್ದಕ್ಕಿದ್ದಂತೆ – ಶುರುವಾಗು, ಪ್ರಾರಂಭಿಸು: burst out laughing ಪಕ್ಕನೆ ನಗತೊಡಗು.
    3. (ಯುದ್ಧ, ರೋಗ, ಗಲಭೆ, ಮೊದಲಾದವುಗಳ ವಿಷಯದಲ್ಲಿ) ಹಠಾತ್ತಾಗಿ – ತಲೆದೋರು, ಉಂಟಾಗು, ಕಾಣಿಸಿಕೊ; ಗೋಚರವಾಗು.
  8. burst up
    1. ಸಿಡಿ; ಒಡೆ.
    2. ಸಿಡಿದು ಹೋಗು; ನಾಶವಾಗು; ಧ್ವಂಸವಾಗು.
    3. ನಾಶಪಡಿಸು; ಧ್ವಂಸ ಮಾಡು.
  9. burst upon ಹಠಾತ್ತಾಗಿ, ಅನಿರೀಕ್ಷಿತವಾಗಿ – ಬರು, ತೋರು.
  10. burst with joy, envy, pride ಹರ್ಷದಿಂದ, ಅಸೂಯೆಯಿಂದ, ಬಡಾಯಿಯಿಂದ ಬೀಗಿ ಬಿರಿ.