See also 2about  3about
1about ಅಬೌಟ್‍
ಕ್ರಿಯಾವಿಶೇಷಣ
  1. ಹೊರಗೆ; ಸುತ್ತ: ಸುತ್ತಲೂ: compass it about ಅದರ ಸುತ್ತ ಸುತ್ತುವರಿ.
  2. (ಒಂದು ಕೇಂದ್ರದ) ಸುತ್ತಲೂ; ಸುತ್ತಮುತ್ತ: ಎಲ್ಲ–ಕಡೆಗೂ, ದಿಕ್ಕಿಗೂ: look about ಸುತ್ತಲೂ ಯಾ ಸುತ್ತಮುತ್ತ ನೋಡು. he was taking her about a lot these days ಅವಳನ್ನು ಎಲ್ಲ ಕಡೆಗೂ (ಅಂದರೆ ಹೋಟೆಲು, ಸಿನಿಮಾ, ಔತಣ, ಮೊದಲಾದವುಗಳಿಗೆ) ಬಹಳ ಕರೆದುಕೊಂಡು ಹೋಗುತ್ತಿದ್ದ.
  3. ಹತ್ತಿರದಲ್ಲಿ; ಸಮೀಪದಲ್ಲಿ: hang about ಹತ್ತಿರದಲ್ಲಿಯೇ ಸುಳಿದಾಡುತ್ತಿರು.
  4. (ಸಂಖ್ಯೆ, ಪ್ರಮಾಣ, ಗುಣ, ಮೊದಲಾದವುಗಳ ವಿಷಯದಲ್ಲಿ) ಹತ್ತಿರ ಹತ್ತಿರ; ಸರಿಸುಮಾರು; ಹೆಚ್ಚುಕಡಮೆ: about half ಹೆಚ್ಚುಕಡಮೆ ಅರ್ಧದಷ್ಟು. about fifty ಸುಮಾರು ಐವತ್ತು. about right ಹೆಚ್ಚುಕಡಮೆ ಸರಿ. much about ಹತ್ತಿರ ಹತ್ತಿರ. I’m about tired of this ನನಗೆ ಇದರ ಬಗ್ಗೆ ಹೆಚ್ಚುಕಡಮೆ ಬೇಸರ ಹತ್ತಿದೆ.
  5. ಸರದಿಯಲ್ಲಿ; ಪಾಳಿಯಲ್ಲಿ: take turns about ಸರದಿಯಂತೆ ಕೆಲಸದಲ್ಲಿರು. on duty (week and) week about ಕೆಲಸದ ಸರದಿ ವಾರದಲ್ಲಿ.
  6. ಹಿಂದುಮುಂದಾಗಿ; ವಿರುದ್ಧ ದಿಕ್ಕಿಗೆ ತಿರುಗಿ: right about turn ಬಲಕ್ಕೆ ತಿರುಗಿ ಹಿಂದು ಮುಂದಾಗು. right about face = right about turn. about turn (ಸೈನ್ಯ ಮೊದಲಾದವುಗಳ ಕವಾಯತ್ತಿನಲ್ಲಿ ಒಂದು ಆಜ್ಞೆ) ಹಿಂದು ಮುಂದಾಗು. about face (ಅಮೆರಿಕನ್‍ ಪ್ರಯೋಗ) = about turn. the wrong way about ವಿರುದ್ಧ ದಿಕ್ಕಿನಲ್ಲಿ.
  7. (ಒಂದರಲ್ಲಿ) ತೊಡಗಿ; ಮಾಡುತ್ತ; ನಿರತನಾಗಿ; ಉದ್ಯುಕ್ತನಾಗಿ: the building which is now about ಈಗ ಕಟ್ಟಲಾಗುತ್ತಿರುವ ಕಟ್ಟಡ.
  8. ಅಲ್ಲಿ ಇಲ್ಲಿ; ಅಲ್ಲಲ್ಲಿ; ಚೆಲ್ಲಾಪಿಲ್ಲಿಯಾಗಿ; ಅಸ್ತವ್ಯಸ್ತವಾಗಿ: tools lying about ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಉಪಕರಣಗಳು. measles is about ದಡಾರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. move about ಅಲ್ಲಿಂದಿಲ್ಲಿಗೆ ಸುತ್ತಾಡು.
  9. ಕಾರ್ಯಗತಿಯಲ್ಲಿ; ಘಟನಾವಳಿಯ ಗತಿಯಲ್ಲಿ: brought it about (ಕಾರ್ಯಗತಿಯಲ್ಲಿ) ಅದನ್ನು ಮಾಡಿದೆ; ಅದು ಆಗುವಂತೆ ಮಾಡಿದೆ. it came about(ಘಟನೆಗಳ ಅನುಕ್ರಮದಂತೆ) ಅದು ಸಂಭವಿಸಿತು.
ಪದಗುಚ್ಛ
  1. come about
    1. (ಕಾಲದ ವಿಷಯದಲ್ಲಿ) ಒಂದು ಸುತ್ತು ಬರು, ಸುತ್ತು.
    2. ಆಗು; ಸಂಭವಿಸು
  2. go about (ಕೆಲಸಕ್ಕೆ) ತೊಡಗು; ಆರಂಭಿಸು.
  3. put about (ಹೋಗುತ್ತಿರುವ ಹಡಗನ್ನು) ಬೇರೆ ದಿಕ್ಕಿಗೆ ತಿರುಗಿಸು.
  4. see about = ಪದಗುಚ್ಛ \((2)\).
ನುಡಿಗಟ್ಟು
  1. am about to do ಇನ್ನೇನು ಮಾಡುವುದರಲ್ಲಿದ್ದೇನೆ.
  2. go a long way about ಕೊಂಕಣ ಸುತ್ತಿ ಮೈಲಾರಕ್ಕೆ ಹೋಗು; ಬಳಸು ದಾರಿ ಹಿಡಿ.
  3. out and about (ಮುಖ್ಯವಾಗಿ ಕಾಯಿಲೆ ಬಿದ್ದು ಚೇತರಿಸಿಕೊಂಡ ಮೇಲೆ) ಹಾಸಿಗೆಯಿಂದ ಎದ್ದು ಓಡಾಡುತ್ತ; ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗಿ.
  4. the other way about ತದ್ವಿರುದ್ಧವಾಗಿ; ತಿರುಗುಮುರುಗಾಗಿ.
  5. to bring about
    1. ಆಗಮಾಡಿಸು; ನೆರವೇರಿಸು; ಜಾರಿಗೆ ತರು.
    2. (ಒಂದು ಸುತ್ತು) ಸುತ್ತಿಸು; ತಿರುಗಿಸು.
  6. up and about (ನಿದ್ದೆ ಯಾ ಕಾಯಿಲೆಯಿಂದ) ಎದ್ದು; ಚೇತರಿಸಿಕೊಂಡು.