See also 2yes
1yes ಯೆಸ್‍
ಕ್ರಿಯಾವಿಶೇಷಣ
  1. (ಪ್ರಶ್ನೆಗೆ ಉತ್ತರವಾಗಿ ದಿಟ, ಅಂತೆಯೇ, ಆಗಲಿ, ಮೊದಲಾದವನ್ನು ಸೂಚಿಸುವ ಪದವಾಗಿ) ಹೌದು; ಹುಂ; ಸರಿ; ಹೂ(ಂ); ನಿಜ; ದಿಟ: ‘isn’t it ready?’ ‘yes , it is’ ‘ಅದಿನ್ನೂ ಸಿದ್ಧವಾಗಿಲ್ಲವೇ?’ ‘ಹುಂ, ಸಿದ್ಧವಾಗಿದೆ’ .
  2. (ಯಾರಾದರೂ ಕರೆದಾಗ, ಸಂಬೋಧಿಸಿ ಮಾತನಾಡುವಾಗ) ‘ನಾನಿಲ್ಲಿದ್ದೇನೆ’ , ‘ಹುಂ, ನಿಮ್ಮ ಮಾತು ಕೇಳಿಸುತ್ತಾ ಇದೆ’, ಇತ್ಯಾದಿ.
ಪದಗುಚ್ಛ
  1. yes?
    1. ನಿಜವೇ? ನಿಜವಾಗಿಯೂ? ಹೌದೇ?
    2. ನಿನಗೆ ಬೇಕಾಗಿರುವುದೇನು? ಏನು ಬೇಕಾಗಿದೆ?
  2. yes and (ಇನ್ನೂ ಹೆಚ್ಚು ಬಲವಾದ ಪದಗುಚ್ಛಗಳನ್ನು ಸೇರಿಸುವಲ್ಲಿ): I could endure, yes, and enjoy it ಅದನ್ನು ಸಹಿಸಬಲ್ಲವನಾಗಿದ್ದೆ, ಹೌದು, ಅದರ ಸುಖವನ್ನು ಅನುಭವಿಸಬಲ್ಲವನೂ ಆಗಿದ್ದೆ.
  3. yes and no ಅದು ಭಾಗಶಃ ಹೌದು (ದಿಟ), ಭಾಗಶಃ ಇಲ್ಲ (ಸುಳ್ಳು).
  4. yes, yes (ಒತ್ತಿ ಹೇಳುವಲ್ಲಿ) ಹೌದು ಹೌದು; ದಿಟದಿಟ.