See also 2while  3while  4while
1while ವೈಲ್‍
ನಾಮವಾಚಕ
  1. (ಕೆಲಸ ಮೊದಲಾದವಕ್ಕೆ ಹಿಡಿದ, ವಿನಿಯೋಗಿಸಿದ, ಕಳೆದ) ಹೊತ್ತು; ವೇಳೆ; ಸಮಯ; ಅವಧಿ; ಕಾಲ: go away for a while ಸ್ವಲ್ಪ ಹೊತ್ತು ಹೊರಟುಹೋಗು.
    1. ಬೇರೊಂದು ಕ್ರಿಯೆಯ, ಕೆಲಸದ ಮಧ್ಯೆ, ನಡುವೆ.
    2. (ಕಾವ್ಯಪ್ರಯೋಗ) ಆಗ; ಆ ಹೊತ್ತು; ಆ ಸಮಯದ – ಮಧ್ಯೆ, ನಡುವೆ.
  2. ಸ್ವಲ್ಪ ಕಾಲ, ಸಮಯ: have not seen you a while ಸ್ವಲ್ಪಕಾಲದಿಂದ ನಿನ್ನನ್ನು ನೋಡಿಲ್ಲ.
ಪದಗುಚ್ಛ
  1. a good (or great) while ಬಹಳ ಕಾಲ; ಸುಮಾರು ಹೊತ್ತು.
  2. all the while ಆ ಇಡೀ ಸಮಯದಲ್ಲಿ; ಉದ್ದಕ್ಕೂ.
  3. between whiles (ಬೇರೆ, ಇತರ ಕೆಲಸಗಳು, ಘಟನೆಗಳು, ಮೊದಲಾದವುಗಳ) ನಡುವೆ.
  4. for a long while ಬಹಳ ಕಾಲದಿಂದ: have not seen him for a long while ಬಹಳ ಕಾಲದಿಂದಲೂ ಅವನನ್ನು ನೋಡಿಲ್ಲ.
  5. (for) a while ಸ್ವಲ್ಪ ಕಾಲದಿಂದ.
  6. in a (or little) while ಬೇಗನೆ; ಕೊಂಚ, ಸ್ವಲ್ಪ – ಹೊತ್ತಿನಲ್ಲಿ.
  7. once in a while ಆಗಲೋ ಈಗಲೋ ಒಮ್ಮೆ; ಯಾವಾಗಲಾದರೊಮ್ಮೆ. he will make it worth your while ನಿನಗೆ ತಕ್ಕಷ್ಟು ಪ್ರತಿಫಲ ಕೊಡುತ್ತಾನೆ.
  8. the while (or whilst)
    1. (ಕಾವ್ಯಪ್ರಯೋಗ) ಆಗ; ಆ ಹೊತ್ತು; ಆ ವೇಳೆ.
    2. ಬೇರೆ ಕೆಲಸದ ಸಮಯದಲ್ಲಿ.
  9. worth one’s while ಪ್ರಯೋಜನಕಾರಿಯಾದ; ಉಪಯುಕ್ತ; ಸಾರ್ಥಕ: it isn’t worth while going there ಅಲ್ಲಿಗೆ ಹೋಗುವುದರಿಂದ ಏನೂ ಪ್ರಯೋಜನವಿಲ್ಲ.