See also 2vapour
1vapour ವೇಪರ್‍
ನಾಮವಾಚಕ
  1. ಹಬೆ; ಧೂಮ; (ವಾಯುಮಂಡಲದಲ್ಲಿ ಕಂಡುಬರುವ) ಮಂಜು (ರೂಪದ ತೇವ) ಯಾ ಹೊಗೆ.
  2. (ಭೌತವಿಜ್ಞಾನ) ಆವಿ; ಬಾಷ್ಪ; ಸಾಮಾನ್ಯವಾಗಿ ದ್ರವಸ್ಥಿತಿಯಲ್ಲಿರುವ, ವಿರಳವಾಗಿ (ಕೆಲವು ಪದಾರ್ಥಗಳ ವಿಷಯದಲ್ಲಿ) ಘನಸ್ಥಿತಿಯಲ್ಲಿರುವ ಪದಾರ್ಥದ ಅನಿಲರೂಪ.
  3. (ವೈದ್ಯಶಾಸ್ತ್ರ) ಹಬೆ; ಔಷಧಿಯಾಗಿ ಉಸಿರಾಡುವುದಕ್ಕೆ ಬಳಸುವ ಯಾವುದೇ ಪದಾರ್ಥ.
  4. ಪೊಳ್ಳುಕಲ್ಪನೆ; ಹುರುಳಿಲ್ಲದ, ನಿಜವಲ್ಲದ – ವಸ್ತು ಯಾ ವಿಷಯ; it’s all mere vapoury ಅದೆಲ್ಲ ಬರಿಯ ಪೊಳ್ಳುಕಲ್ಪನೆ.
  5. (ಬಹುವಚನದಲ್ಲಿ) (ಪ್ರಾಚೀನ ಪ್ರಯೋಗ)
    1. (ಮನಸ್ಸಿನ) ಮಂಕು; ಮನೋಮಾಲಿನ್ಯ; ವಿಷಣ್ಣತೆ; ಗ್ಲಾನಿ; ವ್ಯಾಕುಲತೆ.
    2. (ಉನ್ಮಾದ ಮೊದಲಾದ ಯಾವುದೇ ಬಗೆಯ) ಮನೋವಿಕಾರ.