See also 1twist
2twist ಟ್ವಿಸ್ಟ್‍
ಸಕರ್ಮಕ ಕ್ರಿಯಾಪದ
  1. ತಿರುಚು; ನುಲಿ; ಒಂದು ತುದಿಯನ್ನು ತಿರುಚಿ ಯಾ ಎರಡು ತುದಿಗಳನ್ನು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಸುತ್ತಿಸಿ ರೂಪಿಸು, ರಚಿಸು, ಆಕಾರ ಕೊಡು.
  2. ತಿರುಚು; ತಿರುಚಿ ಯಾ ಎಳೆದು ಆಕಾರ ಕೆಡಿಸು, ವಕ್ರಮಾಡು: twisted my knee ನನ್ನ ಮಂಡಿ ತಿರುಚಿಕೊಂಡೆ. her features were twisted with pain ಅವಳ ಮುಖ ನೋವಿನಿಂದ ವಕ್ರವಾಯಿತು.
    1. (ದಾರದ ಎಳೆಗಳು ಮೊದಲಾದವನ್ನು ಪರಸ್ಪರ, ಒಂದರೊಡನೆ ಒಂದನ್ನು) ಹೆಣೆ; ಹೊಸೆ.
    2. ಎಳೆಗಳನ್ನು ಹೊಸೆದು (ಹಗ್ಗ ಮೊದಲಾದವನ್ನು) ಮಾಡು; (ಹಗ್ಗ ಮೊದಲಾದವನ್ನು) ಹೊಸೆ.
    3. (ಬೇರೊಂದರೊಡನೆ) ಹೆಣೆ; ಒಳಸೇರಿಸಿ ನೇಯು.
    4. ಹೆಣೆದು, ಹೊಸೆದು, ನೆಯ್ದು–ಮಾಡು, ರಚಿಸು.
  3. (ತುದಿಗಳನ್ನು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಸುತ್ತಿಸಿ, ನುಲಿದು ಸರಳು, ಕಂಬ, ಹಗ್ಗ, ಮೊದಲಾದವುಗಳಿಗೆ) ಸುರುಳಿ ಆಕಾರ ಕೊಡು; ಸುರುಳಿ ಮಾಡು.
  4. ತಿರುಚಿ ಕಿತ್ತುಹಾಕು; ನುಲಿದು ಮುರಿದು ಹಾಕು.
  5. (ಮುಖ್ಯವಾಗಿ ಬಿಲಿಯರ್ಡ್‍ ಆಟದಲ್ಲಿ) (ಚೆಂಡನ್ನು) ತಿರುಚಿಕೊಂಡು ಹೋಗುವಂತೆ ಹೊಡೆ.
  6. (ಹೂವು ಮೊದಲಾದವನ್ನು ಹೆಣೆದು) ಮಾಲೆಕಟ್ಟು; ಹಾರ, ಸರ, ದಂಡೆ–ಕಟ್ಟು.
  7. (ಗುಂಪು ಮೊದಲಾದವುಗಳಲ್ಲಿ) ನುಲಿಚಿಕೊಂಡು ದಾರಿ ಮಾಡಿಕೊ; ಸುತ್ತಿಬಳಸಿಕೊಂಡು ಹೋಗು.
  8. (ರೂಪಕವಾಗಿ) ಮಾತನ್ನು ತಿರುಚು; ತನಗೆ ಬೇಕಾದ ಅರ್ಥ ಯಾ ಅಪಾರ್ಥ ಬರುವಂತೆ ಅರ್ಥಮಾಡು: wants to twist my words into an admission of error ನಾನು ತಪ್ಪೊಪ್ಪಿಕೊಂಡೆನೆಂಬ ಭಾವನೆ ಬರುವ ಹಾಗೆ ನನ್ನ ಮಾತುಗಳನ್ನು ಅವನು ತಿರುಚಬಯಸುತ್ತಾನೆ.
  9. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಮೋಸ ಮಾಡು; ವಂಚಿಸು; ದಗಾಹಾಕು: twisted me out of Rs.200 ನನಗೆ ಇನ್ನೂರು ರೂಪಾಯಿ ದಗಾಹಾಕಿದ.
ಅಕರ್ಮಕ ಕ್ರಿಯಾಪದ
  1. (ಗಿಡದ ವಿಷಯದಲ್ಲಿ) ತಿರುಚಿಕೊಂಡು ಬೆಳೆ; ಸುರುಳಿ ಸುತ್ತಿಕೊಂಡು ಯಾ ಸುರುಳಿಯಾಗಿ ಬೆಳೆ.
  2. ಸುರುಳಿಯಾಗು; ತಿರುಚಿಕೊ.
  3. ಸೊಟ್ಟನಾಗಿ ತಿರುಚಿಕೊ; ವಕ್ರವಾಗಿ ತಿರುಗು: he twisted round in his seat ಅವನು ತನ್ನ ಆಸನದಲ್ಲಿ ವಕ್ರವಾಗಿ ತಿರುಗಿದ.
  4. ತಿರುಚು ಕುಣಿತ ಕುಣಿ; ಅಂಗಾಂಗಗಳನ್ನು ಬಗ್ಗಿಸಿ, ತಿರುಗಿಸಿ ನೃತ್ಯ ಮಾಡು.
ಪದಗುಚ್ಛ
  1. twist a person’s arm (ಆಡುಮಾತು)
    1. ಒಬ್ಬನ ಕೈ ಯಾ ಮಣಿಕಟ್ಟನ್ನು ತಿರುಚಿ ಚಿತ್ರಹಿಂಸೆ ಮಾಡು.
    2. (ರೂಪಕವಾಗಿ) (ಒಬ್ಬನ ಮೇಲೆ, ಮುಖ್ಯವಾಗಿ ನೈತಿಕ ಒತ್ತಡ ಹೇರಿ) ಬಲಾತ್ಕರಿಸು; ಬಲವಂತ ಮಾಡು.
  2. twist (person) round one’s (little) $^1$finger.