See also 2twist
1twist ಟ್ವಿಸ್ಟ್‍
ನಾಮವಾಚಕ
  1. ಹೊಸೆತ; ಹೆಣೆತ; ನುಲಿತ; ತಿರುಚುವುದು.
  2. ತಿರುಚು; ತಿರುಚಿದ ಸ್ಥಿತಿ.
  3. ತಿರುಚು; ತಿರುಚಿದ–ರೀತಿ ಯಾ ಪ್ರಮಾಣ.
  4. ತಿರುಚಿ ಹೊಸೆದು ಮಾಡಿದ ಯಾ ಹಾಗೆ ಮಾಡಿದಂತೆ ಕಾಣುವ–ವಸ್ತು.
  5. (ಮುಖ್ಯವಾಗಿ ಎಳೆಗಳನ್ನು ಒಟ್ಟಿಗೆ ಹೊಸೆದು ಮಾಡಿದ) ದಾರ; ಹಗ್ಗ; ಮಿಣಿ.
  6. ತಿರುಚು; ವಸ್ತುವೊಂದು ತಿರುಚಿಕೊಳ್ಳುವ ಯಾ ಬಾಗುವ ಸ್ಥಾನ, ಸ್ಥಳ.
  7. (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) (ಮನಸ್ಸು, ಸ್ವಭಾವ, ಮೊದಲಾದವುಗಳ) ವಿಕೃತಿ; ವಕ್ರತೆ; ಕೊಂಕು; ವೈಚಿತ್ರ್ಯ; ವಿಚಿತ್ರ ಪ್ರವೃತ್ತಿ.
  8. (ಮುಖ್ಯವಾಗಿ ಕಥೆ ಮೊದಲಾದವುಗಳಲ್ಲಿ) ಘಟನೆಗಳ ಅನಿರೀಕ್ಷಿತ–ತಿರುವು, ಬೆಳವಣಿಗೆ.
  9. (ದರ್ಜಿಗಳು ಮೊದಲಾದವರು ಬಳಸುವ) ರೇಷ್ಮೆಯ–ಹುರಿ, ಗಟ್ಟಿದಾರ.
  10. ಸುರುಳಿ; ಸುರುಳಿಯಾಕಾರದಲ್ಲಿ ತಿರುಚಿದ ಬ್ರೆಡ್ಡು, ಹೊಗೆಸೊಪ್ಪು, ಮೊದಲಾದವು.
  11. (ಬ್ರಿಟಿಷ್‍ ಪ್ರಯೋಗ) ಎರಡೂ ತುದಿಗಳನ್ನು ತಿರುಚಿದ ಕಾಗದದ ಪೊಟ್ಟಣ.
  12. (ಪಾನೀಯಕ್ಕೆ ರುಚಿಕೊಡಲು ಸೇರಿಸಿದ) ನಿಂಬೆಹಣ್ಣು ಮೊದಲಾದವುಗಳ ಸುರುಳಿ, (ಸುತ್ತಿಸಿದ) ತುಂಡು.
  13. (ಕ್ರಿಕೆಟ್‍ ಮೊದಲಾದ ಆಟಗಳಲ್ಲಿ ಚೆಂಡು ಕಮಾನಾಗಿ ಹೋಗುವಂತೆ ಅದಕ್ಕೆ ಕೊಡುವ) ಸುತ್ತು ಚಲನೆ.
  14. ತಿರುಚು ಪ್ರವೃತ್ತಿ; ತಿರುಚುವ ಶಕ್ತಿ.
  15. ಕಂಬಿ ಮೊದಲಾದವು ತಿರುಚಿರುವ ಪ್ರಮಾಣ ಯಾ ಕೋನ.
  16. ಸುತ್ತುಚಲನೆ; ಅಕ್ಷವೊಂದರ ಮೇಲೆ ಸುತ್ತುತ್ತಾ ಮುಂದಕ್ಕೆ ಸಾಗುವ ಚಲನೆ.
  17. (ಬ್ರಿಟಿಷ್‍ ಪ್ರಯೋಗ) (ಎರಡು ಪದಾರ್ಥಗಳನ್ನು ಬೆರೆಸಿ ಮಾಡಿದ) ಮಿಶ್ರಪಾನೀಯ.
  18. (ಬ್ರಿಟಿಷ್‍ ಪ್ರಯೋಗ) ಮೋಸ; ವಂಚನೆ; ದಗಾ.
  19. ತಿರುಚು ಕುಣಿತ, ನೃತ್ಯ; ಅಂಗಾಂಗಗಳನ್ನು ತಿರುಚುತ್ತಾ ಮಾಡುವ, 1960ರ ದಶಕದಲ್ಲಿ ಜನಪ್ರಿಯವಾಗಿದ್ದ, ಒಂದು ನರ್ತನ ಪ್ರಕಾರ.
  20. (ಆಡುಮಾತು) ಭಾರಿ ಹಸಿವು.
ಪದಗುಚ್ಛ

round the twist (ಬ್ರಿಟಿಷ್‍ ಪ್ರಯೋಗ ಅಶಿಷ್ಟ) ತಲೆಕೆಟ್ಟ; ಐಲಿನ.