See also 1tune
2tune ಟ್ಯೂನ್‍
ಸಕರ್ಮಕ ಕ್ರಿಯಾಪದ
  1. (ಪಿಟೀಲು, ಪಿಯಾನೋ, ಮೊದಲಾದ ವಾದ್ಯಗಳನ್ನು) ಶ್ರುತಿಮಾಡು.
  2. (ರೇಡಿಯೋ, ಗ್ರಾಹಕ, ಮೊದಲಾದವನ್ನು) ಒಂದು ನಿರ್ದಿಷ್ಟ ತರಂಗಾಂತರಕ್ಕೆ ಯಾ ಸಂಕೇತಕ್ಕೆ ಅಳವಡಿಸು, ಹೊಂದಿಸು.
  3. (ಎಂಜಿನ್‍ ಮೊದಲಾದವನ್ನು) ಟ್ಯೂನ್‍ಮಾಡು; ಸಲೀಸಾಗಿ, ಸಮರ್ಥವಾಗಿ ನಡೆಯುವಂತೆ ಕ್ರಮಪಡಿಸು.
  4. (ರೂಪಕವಾಗಿ) (ನಿಯುತಮಟ್ಟಕ್ಕೆ, ಉದ್ದೇಶಕ್ಕೆ, ಸಂದರ್ಭಕ್ಕೆ) ಹೊಂದಿಸು; ಅನುಗೊಳಿಸು; ಅಳವಡಿಸು.
  5. (ಕಾವ್ಯಪ್ರಯೋಗ)
    1. ವಾದ್ಯದಲ್ಲಿ–ನುಡಿಸು, ಬಾರಿಸು.
    2. ಗಾಯನ ಮಾಡು; ಹಾಡು: lark tunes his song ಬಾನಾಡಿ ಗೀತ ಹಾಡುತ್ತದೆ.
  6. ಹಾಡು; ಕೊಂಡಾಡು; ಹೊಗಳು; ಸ್ತುತಿಸು.
ಅಕರ್ಮಕ ಕ್ರಿಯಾಪದ
  1. ಶ್ರುತಿಗೂಡು; ಮೇಳವಾಗು.
  2. (ರೂಪಕವಾಗಿ) ಸಮರಸದಿಂದಿರು; ಹೊಂದಿಕೊ.
  3. ರೇಡಿಯೋ (ಗ್ರಾಹಕ)ವನ್ನು ನಿರ್ದಿಷ್ಟ ಸಂಕೇತಕ್ಕೆ–ಹಾಕು, ತಿರುಗಿಸು: tuned into Radio 2 ರೇಡಿಯೋ 2(ನೇ ಸಂಕೇತ)ಕ್ಕೆ ಹಾಕು.
ಪದಗುಚ್ಛ
  1. tune in
    1. (ರೇಡಿಯೋ ವಿಷಯದಲ್ಲಿ) ಸರಿಯಾದ ತರಂಗಾಂತರಕ್ಕೆ–ತಿರುಗಿಸು, ಹೊಂದಿಸು: tune in to the BBC (ಆಕಾಶವಾಣಿ) ಬಿಬಿಸಿಗೆ ತಿರುಗಿಸು.
    2. (ರೂಪಕವಾಗಿ) ಸರಿಯಾದ ಸ್ಥಿತಿಯಲ್ಲಿರು: you are not properly tuned in ನೀನು ಪರಿಸ್ಥಿತಿಗೆ ಸರಿಯಾಗಿ ಹೊಂದಿಕೊಂಡಿಲ್ಲ.
    3. (ರೂಪಕವಾಗಿ) (ಇನ್ನೊಬ್ಬರ ಮಾತು, ಭಾವನೆ, ಮೊದಲಾದವನ್ನು) ಸರಿಯಾಗಿ ಅರ್ಥಮಾಡಿಕೊ: he is not very well tuned to his circumstances ಅವನು ಸುತ್ತಲಿನ ಸಂದರ್ಭಗಳನ್ನು ಸರಿಯಾಗಿ ಅರ್ಥಮಾಡಿ ಕೊಂಡಿಲ್ಲ.
  2. tune out (ರೇಡಿಯೋ)(ಬೇಡವಾದ ತರಂಗಾಂತರ ಸಂಜ್ಞೆ ಮೊದಲಾದವನ್ನು ಬದಲಾಯಿಸಿ) ಸರಿಯಾಗಿ ಶ್ರುತಿಮಾಡು.
  3. tune up
    1. (ವಾದ್ಯಮೇಳದವರ ವಿಷಯದಲ್ಲಿ) (ಎಲ್ಲ ವಾದ್ಯಗಳನ್ನೂ) ಪರಿಪೂರ್ಣ ಸ್ಥಿತಿಯಲ್ಲಿಟ್ಟು ಸರಿಯಾದ ಯಾ ಒಂದೇ ಶ್ರುತಿಗೆ ತರು; ಶ್ರುತಿ ಮಾಡು.
    2. ಹಾಡಲು ಯಾ (ವಾದ್ಯ) ನುಡಿಸಲು ಪ್ರಾರಂಭಿಸು.
    3. ಅತ್ಯಂತ ಸಮರ್ಥ ಯಾ ಪರಿಣಾಮಕಾರಿಯಾದ ಸ್ಥಿತಿಗೆ ತರು.
  4. tune with ಹೊಂದಿಕೊ; ಸಾಮರಸ್ಯದಿಂದಿರು.