See also 2tune
1tune ಟ್ಯೂನ್‍
ನಾಮವಾಚಕ
  1. ರಾಗ; ಧಾಟಿ; ಮಟ್ಟು.
  2. ಶ್ರುತಿ: sings in tune ಶ್ರುತಿಗೆ ಸರಿಯಾಗಿ ಹಾಡುತ್ತಾನೆ.
  3. (ವಾದ್ಯ ಮೊದಲಾದವುಗಳ) ಶ್ರುತಿ: this piano is out of tune ಈ ಪಿಯಾನೋ ಶ್ರುತಿ ತಪ್ಪಿದೆ.
  4. (ಸುತ್ತ ಮುತ್ತಲ ವಾತಾವರಣ ಮೊದಲಾದವಕ್ಕೆ) ಹೊಂದಿಕೆ; ಸಾಂಗತ್ಯ; ಸಾಮರಸ್ಯ: out of tune with one’s surroundings ಪರಿಸ್ಥಿತಿಗೆ ಹೊಂದಿಕೊಳ್ಳದೆ.
  5. ಸರಿಯಾದ ಸ್ಥಿತಿ; ಸಮಸ್ಥಿತಿ.
  6. (ಒಂದು ಉದ್ದೇಶ ಮೊದಲಾದವಕ್ಕೆ) ತಕ್ಕ ಮನೋಭಾವ; ಉಚಿತವಾದ–ಮನೋವೃತ್ತಿ, ಚಿತ್ತವೃತ್ತಿ.
ಪದಗುಚ್ಛ
  1. call the tune ಘಟನೆಗಳ ಮೇಲೆ ಅಧಿಕಾರ, ಹತೋಟಿ ಇಟ್ಟುಕೊ; ಆಗುಹೋಗುಗಳನ್ನು ನಿಯಂತ್ರಿಸು.
  2. change one’s tune ಮಾತಿನ ಯಾ ವರ್ತನೆಯ ರೀತಿ ಯಾ ಧಾಟಿ–ಬದಲಾಯಿಸು.
  3. in tune ಶ್ರುತಿಗೂಡಿ; ಶ್ರುತಿಗೆ ಸರಿಯಾಗಿ; ಸರಿಯಾದ ಯಾ ತಕ್ಕ ಶ್ರುತಿಯಲ್ಲಿ.
  4. in tune with (ತನ್ನ ಗುಂಪು, ಪರಿಸರ, ಮೊದಲಾದವುಗಳೊಡನೆ) ಹೊಂದಿಕೆಯಿಂದ; ಹೊಂದಿಕೊಂಡು; ಸಾಮರಸ್ಯದಿಂದ.
  5. out of tune ಶ್ರುತಿಗೆಟ್ಟು; ಶ್ರುತಿತಪ್ಪಿ; ಶ್ರುತಿಗೆ ಹೊಂದಿಕೊಳ್ಳದೆ.
  6. out of tune with (ತನ್ನ ಗುಂಪು, ಪರಿಸರ, ಮೊದಲಾದವುಗಳೊಡನೆ) ಹೊಂದಿಕೆಯಿಲ್ಲದೆ; ಸಾಮರಸ್ಯವಿಲ್ಲದೆ; ಘರ್ಷಣೆಯಿಂದ.
  7. sing another (or a different) tune = ಪದಗುಚ್ಛ\((2)\).
  8. to the tune of (ಆಡುಮಾತು) ಆ ಮಟ್ಟಕ್ಕೆ; ಆ ಪ್ರಮಾಣದ ವರೆಗೆ: to the tune of a hundred rupees ನೂರು ರೂಪಾಯಿಗಳವರೆಗೆ.