See also 2tub
1tub ಬ್‍
ನಾಮವಾಚಕ
  1. (ಚಪ್ಪಟೆ ತಳದ,ಸಾಮಾನ್ಯವಾಗಿ ದುಂಡಾಗಿರುವ) ಮರ ಮೊದಲಾದವುಗಳ ತೊಟ್ಟಿ, ಬಉ.
  2. ಬೆಣ್ಣೆ, ಟೀ, ಧಾನ್ಯ, ಮೊದಲಾದವುಗಳ ಹಲವು ಬಗೆಯ ಅಳತೆ.
  3. (ಆಡುಮಾತು) ತೊಟ್ಟಿಸ್ನಾನ: jumped into his tub ಅವನು ಸ್ನಾನದ ತೊಟ್ಟಿಗೆ ದುಮುಕಿದ. seldom has a tub ಅವನಿಗೆ ಬಹುತೇಕ ಸ್ನಾನವೇ ಇಲ್ಲ.
  4. (ಗಣಿಗಾರಿಕೆ) (ಅದುರು, ಕಲ್ಲಿದ್ದಲು, ಮೊದಲಾದವನ್ನು ಸಾಗಿಸುವ) ಪೆಟ್ಟಿಗೆ; ತೊಟ್ಟಿ.
  5. (ಆಡುಮಾತು)
    1. ನಿಧಾನದ, ಒಡ್ಡೊಡ್ಡಾದ ದೋಣಿ.
    2. ಅಭ್ಯಾಸದ ಯಾ ಕಲಿಕೆಯ ದೋಣಿ; ಹುಟ್ಟುಹಾಕುವುದನ್ನು ಕಲಿಯಲು ಬಳಸುವ ಗಟ್ಟಿದೋಣಿ.
  6. (ಸಾಮಾನ್ಯವಾಗಿ ಪ್ಲಾಸ್ಟಿಕ್ಕಿನ) ತೊಟ್ಟಿಯಾಕಾರದ ಪೆಟ್ಟಿಗೆ.
  7. ತೊಟ್ಟಿ–ತುಂಬ, ಭರ್ತಿ; ತೊಟ್ಟಿ ತುಂಬಉವಷ್ಟು ಪ್ರಮಾಣ.