See also 2trip
1trip ಟ್ರಿಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tripped;
ಸಕರ್ಮಕ ಕ್ರಿಯಾಪದ
    1. (ವ್ಯಕ್ತಿಗೆ) ಕಾಲು ಕೊಟ್ಟು, ತೊಡರುಕೊಟ್ಟು, ಮುಗ್ಗರಿಸುವಂತೆ ಯಾ ಎಡವಿ ಬೀಳುವಂತೆ ಮಾಡು.
    2. ಎಡವುವಂತೆ, ತಪ್ಪು ಮಾಡುವಂತೆ ಮಾಡು; ಅಸಂಬದ್ಧವಾಗುವಂತೆ, ತಪ್ಪಾಗಿರುವಂತೆ, ನೀತಿಗೆಡುವಂತೆ–ಮಾಡು: the lawyer tripped the witness ಲಾಯರು ಸಾಕ್ಷಿಯನ್ನು ಎಡವಿಸಿದ, ತಪ್ಪುನುಡಿಯುವಂತೆ ಮಾಡಿದ.
  1. ತಪ್ಪು ಮಾಡುತ್ತಿರುವಾಗ (ವ್ಯಕ್ತಿಯನ್ನು) (ಕಂಡು) ಹಿಡಿ.
  2. (ನೌಕಾಯಾನ)
    1. ತಳವೂರಿದ ಲಂಗರನ್ನು ಹೊರಜಿಯಿಂದ ಎಳೆದು ಬಿಡಿಸು, ಎತ್ತು.
    2. (ದೂಲ ಮೊದಲಾದವನ್ನು ಕೆಳಗಿಳಿಸಲು) ಕ್ಷಿತಿಜ ಮಟ್ಟದಿಂದ ಲಂಬವಾಗಿ ತಿರುಗಿಸು.
  3. (ಯಂತ್ರಭಾಗವನ್ನು ಹಿಡಿಕೆ ತೆಗೆದು) ತಟಕ್ಕನೆ–ಬಿಡು, ಕಳಚು.
  4. ತಪ್ಪು ಯಾ ಅಪರಾಧ, ಪ್ರಮಾದ–ಮಾಡಿಸು, ಮಾಡಲು ಕಾರಣವಾಗು.
  5. ವ್ಯಕ್ತಿಯನ್ನು ಅಪರಾಧ ಮಾಡುತ್ತಿರುವಾಗ ಕಂಡುಹಿಡಿ, ಪತ್ತೆಮಾಡು.
ಅಕರ್ಮಕ ಕ್ರಿಯಾಪದ
  1. ಬೇಗಬೇಗ, ಹಗುರ ಹೆಜ್ಜೆಯಲ್ಲಿ–ನಡೆ ಯಾ ನರ್ತಿಸು; ಪಟಪಟನೆ–ನಡೆ, ನರ್ತಿಸು.
  2. (ರೂಪಕವಾಗಿ) (ಲಯ, ತಾಳ, ಮೊದಲಾದವುಗಳ ವಿಷಯದಲ್ಲಿ) ಹಗುರವಾಗಿ ಓಡು.
  3. (ಒಂದು ಸ್ಥಳಕ್ಕೆ) ಪ್ರಯಾಣ, ಪ್ರವಾಸ ಹೊರಡು; ಸಂಚಾರ ನಡೆಸು.
  4. (ಆಡುಮಾತು) ಮಾದಕ ದ್ರವ್ಯ ಸೇವಿಸಿ - ಭ್ರಾಂತಿಗೊಳಗಾಗು, ಭ್ರಮಾಧೀನವಾಗು.
  5. ಎಡವು; ಮುಗ್ಗರಿಸು: he tripped over the root of a tree ಅವನು ಮರದ ಬೇರನ್ನು ಎಡವಿದ.
  6. ಎಡವು; ತಪ್ಪುಮಾಡು; ಅಸಂಬದ್ಧವಾಗಿ ಯಾ ತಪ್ಪಾಗಿ ಮಾತನಾಡು; ನೀತಿ ತಪ್ಪು.
ಪದಗುಚ್ಛ

trip up ಎಡವು; ಮುಗ್ಗರಿಸುವಂತೆ ಮಾಡು.