See also 2tremble
1tremble ಟ್ರೆಂಬ್‍(ಬ)ಲ್‍
ಅಕರ್ಮಕ ಕ್ರಿಯಾಪದ
  1. (ದಿಗಿಲು, ಕಳವಳ, ನಿಶ್ಶಕ್ತಿ, ಮೊದಲಾದವುಗಳಿಂದ) ನಡುಗು; ಅದುರು; ಕಂಪಿಸು: he was trembling with anger ಅವನು ಕೋಪದಿಂದ ಕಂಪಿಸುತ್ತಿದ್ದ.
  2. (ರೂಪಕವಾಗಿ) ನಡುಗಿಹೋಗು; ತತ್ತರಿಸು; ತತ್ತರಗುಟ್ಟು; ತಳ್ಳಂಕಗೊಳ್ಳು; ತಲ್ಲಣಿಸು; ತಳಮಳಿಸು; ಕಳವಳಗೊಂಡಿರು; ದಿಗಿಲಾಗಿರು: I tremble for his safety ಅವನ ಸುರಕ್ಷತೆಯ ಬಗ್ಗೆ ನಾನು ತಲ್ಲಣಿಸುತ್ತೇನೆ. I trembled at the very thought of it ಅದರ ಯೋಚನೆ ಮಾತ್ರದಿಂದಲೇ ನಾನು ನಡುಗಿಹೋದೆ, ತತ್ತರಿಸಿ ಹೋದೆ.
  3. ಅಲುಗು; ಕಂಪಿಸು; ಅಲ್ಲಾಡು; ಹೊಯ್ದಾಡು; (ಅತ್ತಿತ್ತ) ಆಡು: leaves tremble in the breeze ಎಲೆಗಳು ಮೆಲುಗಾಳಿಯಲ್ಲಿ ಅಲ್ಲಾಡುತ್ತವೆ.
ಪದಗುಚ್ಛ

tremble in the balance (ಪ್ರಾಣ ಮೊದಲಾದವು) ಅತ್ಯಂತ ಅಪಾಯಸ್ಥಿತಿಯಲ್ಲಿರು, (ಹಾಗೋ ಹೀಗೋ ಎಂದು) ಹೊಯ್ದಾಡು.