See also 1treble  3treble
2treble ಟ್ರೆಬ್‍(ಬ)ಲ್‍
ನಾಮವಾಚಕ
  1. ಮುಪ್ಪಟ್ಟು; ಮೂರರಷ್ಟು ಪ್ರಮಾಣ; (ವಸ್ತು) ಮೂರರಷ್ಟಿರುವುದು: treble the amount ಮೂರರಷ್ಟು ಮೊತ್ತ.
  2. (ಬಾಣಗಳು) ಗುರಿಹಲಗೆಯ ಮೇಲೆ ಎರಡು ಮಧ್ಯದ ವೃತ್ತಗಳ ನಡುವಣ ಗುರಿಕಣ್ಣಿನ ಮೇಲೆ ಹೊಡೆದು ಮೂರು ಗೆಲ್ಲಂಕ ಗಳಿಸುವುದು.
  3. (ಕುದುರೆ ಜೂಜು) ಮೂರು ಕುದುರೆಗಳ ಮೇಲೆ ಬಾಜಿ(ಪಣ) ಕಟ್ಟುವುದು.
    1. (ವಾದ್ಯದ, ಕಂಠದ ವಿಷಯದಲ್ಲಿ) ತಾರಸ್ಥಾಯಿ.
    2. ತಾರ, ಉಚ್ಚಸ್ವರದ–ಧ್ವನಿ.
  4. (ಸಂಗೀತದ ತಾರ ಯಾ ಉಚ್ಚಸ್ವರಕ್ಕೆ ಅನುಗುಣವಾಗಿ ರೇಡಿಯೋ, ರೆಕಾರ್ಡ್‍ ಪ್ಲೇಯರ್‍, ಮೊದಲಾದವುಗಳಲ್ಲಿ ಹೊರಡುವ) ಅಧಿಕ ಆವರ್ತನದ ಕೃತಿ.
  5. (ಕ್ರೀಡೆ) ಒಂದೇ ಆಟ, ಕ್ರೀಡೆ, ಮೊದಲಾದವುಗಳಲ್ಲಿ ಸಿಗುವ ಮೂರು ಜಯಗಳು, ಗೆಲುವುಗಳು ಯಾ ಚಾಂಪಿಯನ್‍ಷಿಪ್‍ಗಳು.