See also 1traverse
2traverse ಟ್ರಾವರ್ಸ್‍
ಸಕರ್ಮಕ ಕ್ರಿಯಾಪದ
    1. ಪ್ರಯಾಣ ಮಾಡು; ಸಂಚರಿಸು: must traverse a vast extent of country ಬಹು ವ್ಯಾಪಕ ಪ್ರದೇಶ ಪ್ರಯಾಣ ಮಾಡಬೇಕು.
    2. ಅಡ್ಡಹಾಯು; ಹಾಯ್ದಿರು; ಹಾಯ್ದುಹೋಗು: distance traversed by canals ನಾಲೆಗಳು ಹಾಯ್ದುಹೋಗುವ ದೂರ. a pit traversed by a beam ತೊಲೆ ಅಡ್ಡಹಾಯ್ದಿರುವ ಗುಂಡಿ, ಹಳ್ಳ.
  1. (ವಿಷಯವನ್ನು) ಆದ್ಯಂತವಾಗಿ, ಸಮಗ್ರವಾಗಿ–ಪರ್ಯಾಲೋಚಿಸು, ಚರ್ಚಿಸು.
  2. (ಫಿರಂಗಿಯನ್ನು ಅಡ್ಡಡ್ಡಲಾಗಿ) ತಿರುಗಿಸು.
  3. (ನ್ಯಾಯಶಾಸ್ತ್ರ) (ಎದುರಾಳಿ ಹೇಳಿದ್ದನ್ನು) ಇಲ್ಲವೆನ್ನು; ನಿರಾಕರಿಸು.
  4. (ಯೋಜನೆ, ಅಭಿಪ್ರಾಯ, ಮೊದಲಾದವನ್ನು) ಪ್ರತಿಭಟಿಸು; ವಿರೋಧಿಸು; ಮುರಿ; ತಡೆ; ನಿರರ್ಥಕ ಗೊಳಿಸು.
ಅಕರ್ಮಕ ಕ್ರಿಯಾಪದ
  1. (ದಿಕ್ಸೂಚಿಯ ಸೂಜಿ ಮೊದಲಾದವುಗಳ ವಿಷಯದಲ್ಲಿ) ತಿರುಗಣೆಯ ಮೇಲೆ ಯಾ ಆ ರೀತಿ ಸುತ್ತು, ತಿರುಗು.
  2. (ಕುದುರೆಯ ವಿಷಯದಲ್ಲಿ) ಅಡ್ಡಡ್ಡವಾಗಿ ನಡೆ.
  3. (ಬೆಟ್ಟ, ಪ್ರಪಾತ, ಮೊದಲಾದವನ್ನು ಹತ್ತಿಳಿಯುವಾಗ) ಅಡ್ಡಡ್ಡ–ಚಲಿಸು, ಏರು ಯಾ ಇಳಿ.