See also 2traverse
1traverse ಟ್ರಾವರ್ಸ್‍
ನಾಮವಾಚಕ
  1. ಅಡ್ಡಕಟ್ಟಡ; ಅಡ್ಡರಚನೆ; ಮತ್ತೊಂದು ಭಾಗವನ್ನು ಅಡ್ಡಹಾಯುವ ಕಟ್ಟಡದ ಭಾಗ.
  2. (ಚರ್ಚ್‍ ಮೊದಲಾದವುಗಳಲ್ಲಿ) (ಒಂದು ಪಕ್ಕದಿಂದ ಮತ್ತೊಂದು ಪಕ್ಕದವರೆಗೆ ಚಾಚಿದ) ಗ್ಯಾಲರಿ; ಅಡ್ಡಸಾಲಿನ ಪೀಠಪಂಕ್ತಿ.
  3. (ಮೋಜಣಿ) ನಡೆ:
    1. ಕೈವಾರದ ನೆರವಿನಿಂದ ಗುರುತಿಸಿ, ಮೂಲೆಯಾಗಿರುವ ಬಿಂದುಗಳನ್ನು ಸರಪಳಿಯಿಂದ ಬಂಧಿಸಿರುವ ಒಂದು ಮೋಜಣಿ ಸಾಲು.
    2. ಹಾಗೆ ಮೋಜಣಿ ಮಾಡಿದ, ಸರ್ವೆಗೆ ಒಳಗಾದ ಪ್ರದೇಶ, ಭಾಗ.
  4. (ನೌಕಾಯಾನ) (ಎದುರು ಗಾಳಿ, ಅಲೆ, ಮೊದಲಾದವುಗಳಿಂದ ಹಡಗು ಅನುಸರಿಸುವ) ಡೊಂಕು ದಾರಿ; ವಕ್ರಪಥ.
  5. (ಹಿಮದ ಮೇಲೆ ಜಾರುವವನು, ಇಳಿಜಾರಿನಲ್ಲಿ ಅನುಸರಿಸುವ) ಅಂಕುಡೊಂಕು ದಾರಿ; ವಕ್ರಪಥ.
  6. (ಯಂತ್ರ ಭಾಗದ) ಅಡ್ಡಚಲನೆ; ಪಕ್ಕಚಲನೆ.
    1. (ಕಡಿದಾದ ಬೆಟ್ಟ ಯಾ ಪ್ರಪಾತವನ್ನು ಸುಗಮವಾಗಿ ಏರುವಲ್ಲಿ ಯಾ ಇಳಿಯುವಲ್ಲಿ ಬಂಡೆಯ ಮುಖದ ಮೇಲೆ ಮಾಡುವ) ಅಡ್ಡನಡೆ; ಪಕ್ಕಚಲನೆ.
    2. ಇದು ಅಗತ್ಯವಾಗಿರುವ ಜಾಗ, ಸ್ಥಾನ.
  7. (ಸೈನ್ಯ) (ಸಾಲು ಗುಂಡುಹೊಡೆತ ತಪ್ಪಿಸಿಕೊಳ್ಳಲು ಕಂದಕದಲ್ಲಿ ಮಾಡಿರುವ ಯಾ %%% ಬೊ ಇ ಮಿಸಿ ೫೬೮೯%% ಆಕಾರದ ಇಮ್ಮಡಿ ಯಾ ನಾಡಿ) ಸಮಕೋನ ಬಾಗುರಚನೆ.
  8. (ನ್ಯಾಯಶಾಸ್ತ್ರ) (ವಾಸ್ತವವೆಂದು ಎದುರು ಕಕ್ಷಿ ಹೇಳಿದ ಸಂಗತಿಯ) ನಿರಾಕರಣ; ನಿರಾಕರಿಸುವುದು.
  9. (ಫಿರಂಗಿಯನ್ನು ಅಪೇಕ್ಷಿತ ದಿಕ್ಕಿಗೆ) ಅಡ್ಡಡ್ಡವಾಗಿ ತಿರುಗಿಸುವುದು.
  10. ಅಡ್ಡ(ಡ್ಡ), ಪಕ್ಕ(ಪಕ್ಕ)–ಚಲನೆ, ನಡಗೆ.
  11. ಪ್ರಯಾಣ (ಮಾಡುವುದು); ಪ್ರವಾಸ.