See also 2transcendent
1transcendent ಟ್ರಾ(ಟ್ರಾ)ನ್‍ಸೆಂಡಂಟ್‍
ಗುಣವಾಚಕ
  1. ಅತಿಶಯಿಸಿದ; ಮೀರಿದ; ಶ್ರೇಷ್ಠ; ಅತ್ಯುಚ್ಚ; ಅತ್ಯುತ್ಕೃಷ್ಟ; ಲೋಕೋತ್ತರ; ಅಲೌಕಿಕ: transcendent merit ಅತ್ಯುತ್ಕೃಷ್ಟ ಯೋಗ್ಯತೆ. transcendent genius ಲೋಕೋತ್ತರ, ಅಲೌಕಿಕ–ಪ್ರತಿಭೆ.
  2. ಇಂದ್ರಿಯಾತೀತ; ಅಗ್ರಾಹ್ಯ; ಮಾನವಾತೀತ; ಮಾನವನ ಅನುಭವಕ್ಕೆ ಸಿಗದ, ಅದನ್ನು ಮೀರಿದ.
  3. (ತಾರ್ಕಿಕರ ತತ್ತ್ವಶಾಸ್ತ್ರ) (ಅರಿಸ್ಟಾಟಲ್‍ ಹೇಳುವ) ದಶಪದಾರ್ಥಗಳನ್ನು ಮೀರಿದ; ದಶಪದಾರ್ಥಾತೀತ; (ಅವುಗಳಿಗಿಂತ) ಮೇಲಿನ; ವಿಷಯಾತೀತ.
  4. (ಕ್ಯಾಂಟನ ತತ್ತ್ವಶಾಸ್ತ್ರ) ಅನುಭವಾತೀತ.
  5. (ಮುಖ್ಯವಾಗಿ ದೇವರ ವಿಷಯದಲ್ಲಿ) ವಿಶ್ವಾತೀತ; ವಿಶ್ವೋತ್ತೀರ್ಣ; ಸ್ಥೂಲ ಪ್ರಪಂಚದಿಂದ, ವಿಶ್ವದಿಂದ ಬೇರೆಯಾಗಿ, ಸ್ವತಂತ್ರ ಅಸ್ತಿತ್ವ ಪಡೆದಿರುವ; ವಿಶ್ವದ ಪರಿಮಿತಿಗಳಿಗೆ ಒಳಪಡದ.