See also 1tramp
2tramp ಟ್ರಾಂಪ್‍
ನಾಮವಾಚಕ
  1. (ಮನುಷ್ಯರ ಯಾ ಕುದುರೆಯ) ಹೆಜ್ಜೆ ಸದ್ದು; ಕಾಲಸಪ್ಪುಳ; ನಡೆಯುವ ಶಬ್ದ.
  2. (ಮುಖ್ಯವಾಗಿ ದೂರದ) ಕಾಲುನಡಗೆಯ ಪ್ರಯಾಣ; ನಡೆದಾಟ.
  3. (ಪಾದರಕ್ಷೆಯ) ತಳತಗಡು; ಅಗೆಯುವಾಗ ಗುದ್ದಲಿಯ ತುದಿಯನ್ನು ತುಳಿಯುವುದರಿಂದ ಪಾದರಕ್ಷೆಯ ಅಡಿ ಸವೆಯದಂತೆ ಹಾಕಿರುವ ಕಬ್ಬಿಣದ ತಗಡು.
  4. ಪಾದರಕ್ಷೆ ತುಳಿಯುವ ಗುದ್ದಲಿಯ ಭಾಗ.
  5. ಅಲೆಮಾರಿ ಯಾ ಭಿಕ್ಷುಕ.
  6. ಅಲೆಮಾರಿ ಜೀವನ; ಭಿಕ್ಷುಕ ಜೀವನ.
  7. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) (ಹೀನಾರ್ಥಕ ಪ್ರಯೋಗ) ವ್ಯಭಿಚಾರಿ ಹೆಣ್ಣು; ಹಾದರದ ಹೆಂಗಸು.
  8. (ಗೊತ್ತಾದ ಸಂಚಾರ ಮಾರ್ಗಕ್ಕೆ ಕಟ್ಟುಬೀಳದ, ಬೇಕಾದೆಡೆ ಸರಕು ಒಯ್ಯುವ) ಸರಕು ಹಡಗು; ಅಲೆಮಾರಿ ಹಡಗು.
ಪದಗುಚ್ಛ

ocean tramp = 2tramp\((8)\).