See also 2tramp
1tramp ಟ್ರಾಂಪ್‍
ಸಕರ್ಮಕ ಕ್ರಿಯಾಪದ
    1. (ಮುಖ್ಯವಾಗಿ ಸುಸ್ತಾಗಿ ಮತ್ತು ಇಷ್ಟವಿಲ್ಲದೆ) ನಡೆ; ನಡೆದುಕೊಂಡು ಪ್ರಯಾಣ ಮಾಡು, ದೇಶ ತಿರುಗು, ಸುತ್ತಾಡು.
    2. (ದೂರವನ್ನು) ಈ ರೀತಿ ಕ್ರಮಿಸು, ಸಾಗು: tramped 20 miles ಇಪ್ಪತ್ತು ಮೈಲಿ ಕಾಲೆಳೆಯುತ್ತಾ ಸಾಗಿದ.
  1. ದೊಪ್ಪನೆ ತುಳಿ; ತುಳಿದು ಹಾಕು; ತುಳಿದು–ಅಜ್ಜಿಬಜ್ಜಿ ಮಾಡು, ಧ್ವಂಸ ಮಾಡು.
  2. (ಆಸ್ಟ್ರೇಲಿಯ) (ಆಡುಮಾತು) ಕೆಲಸದಿಂದ ವಜಾಮಾಡು, ತೆಗೆದುಹಾಕು.
ಅಕರ್ಮಕ ಕ್ರಿಯಾಪದ
  1. ದಪದಪನೆ ನಡೆ; ಸದ್ದಾಗುವಂತೆ ತುಳಿದು ನಡೆ: heard him tramping about overhead (ತಲೆ) ಮೇಲುಗಡೆ ಅವನು ದಪದಪನೆ ನಡೆದಾಡುತ್ತಿದ್ದುದು ಕೇಳಿಸಿತು.
  2. ಕಾಲುನಡಗೆಯಲ್ಲಿ ಹೋಗು; ನಡೆದುಕೊಂಡು ಹೋಗು.
  3. ಪೋಲಿ ಅಲೆ; ಅಲೆಮಾರಿಯಾಗಿರು; ಅಲೆಮಾರಿಯಂತೆ ಜೀವಿಸು.