See also 1trail
2trail ಟ್ರೇಲ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ನೆಲದ ಮೇಲೆ) ಹಿಂದೆ ಎಳೆದುಕೊಂಡು ಹೋಗು: trailed her dress through the mud ತನ್ನ ಉಡುಪನ್ನು ಹಿಂದೆ ಕೆಸರಿನ ಮೇಲೆ ಎಳೆದುಕೊಂಡು ನಡೆದಳು.
  2. ಜಾಡು ಹಿಡಿದುಹೋಗು; ಬೆನ್ನಟ್ಟಿ ಹೋಗು; ಎಡೆಬಿಡದೆ ಹಿಂಬಾಲಿಸು: trailed him to his house ಅವನ ಮನೆಯವರೆಗೂ ಹಿಂಬಾಲಿಸಿ ಹೋದ.
  3. (ಸಿನಿಮಾ, ರೇಡಿಯೋ ಯಾ ದೂರದರ್ಶನ ಕಾರ್ಯಕ್ರಮ, ಮೊದಲಾದವುಗಳ) ಉದ್ಧ ತಭಾಗಗಳನ್ನು ತೋರಿಸಿ ಪ್ರಚಾರಮಾಡು.
  4. ಜೇಡಿಪಾತ್ರೆಗಳನ್ನು ಅಲಂಕರಿಸಲು ಅವುಗಳ ಬಾಯಿನಾಳದ ಮೂಲಕ ಮುಸುಕುಹಾಕು.
ಅಕರ್ಮಕ ಕ್ರಿಯಾಪದ
  1. ಹಿಂದುಗಡೆ (ಮುಖ್ಯವಾಗಿ ನೆಲದ ಮೇಲೆ) ಎಳೆದಾಡು, ಎಳೆಯಲಾಗು: skirt trails on the ground ಲಂಗ ನೆಲದ ಮೇಲೆ ಎಳೆದಾಡುತ್ತದೆ.
  2. (ಆಯಾಸದಿಂದ) ಕಾಲುಗಳನ್ನೆಳೆದುಕೊಂಡು ನಡೆ, ಹೋಗು; ನಿಧಾನವಾಗಿ ಆಯಾಸದಿಂದ ಹೆಜ್ಜೆಹಾಕು.
  3. (ಉಡುಪಿನ ವಿಷಯದಲ್ಲಿ) ಅಳ್ಳಕವಾಗಿ ನೇತಾಡು; ಜೋಲುಬೀಳು; ಜೋಲಾಡು.
  4. (ಆಟ, ಪಂದ್ಯ, ಮೊದಲಾದವುಗಳಲ್ಲಿ) ಹಿಂದೆಬೀಳು; ಸೋಲುತ್ತಿರು: trailing by three points ಮೂರು ಪಾಯಿಂಟುಗಳಿಂದ ಹಿಂದೆ ಬಿದ್ದು.
  5. ಕ್ರಮೇಣ ಕಡಮೆಯಾಗು ಯಾ ಚೆದರಿಹೋಗು.
  6. (ಗಿಡ ಮೊದಲಾದವುಗಳ ವಿಷಯದಲ್ಲಿ) ನೆಲ, ಗೋಡೆ, (ಮೊದಲಾದವುಗಳ ಮೇಲೆ) ಹಬಉ; ಹರಡಿಕೊ; ಹರಡಿಕೊಂಡು ಏರು.
ಪದಗುಚ್ಛ
  1. trail arms (ಸೈನ್ಯ)ಬಂದೂಕಗಳನ್ನು ನೆಲಕ್ಕೆ ಒಂದು ಕೈಯಲ್ಲಿ ಜೋತುಬೀಳಿಸು ಯಾ (ಬ್ರಿಟಿಷ್‍ ಪ್ರಯೋಗ) ಸಮಾನಾಂತರವಾಗಿ (ಬಲಗೈಯಲ್ಲಿ) ಇಳಿ ಹಿಡಿದು, ಸಮಾನಾಂತರವಾಗಿ ಜೋತು ಬೀಳಿಸು.
  2. trailing clouds of glory ಹಿಂದುಗಡೆಯಲ್ಲಿ ದಿವ್ಯಪ್ರಭೆಯ ಮೇಘರಾಶಿ.
  3. trail one’s coat ಉದ್ದೇಶಪೂರ್ವಕವಾಗಿ ವ್ಯಾಜ್ಯ, ಜಗಳ, ಹೊಡೆದಾಟ, ಮೊದಲಾದವನ್ನು ಪ್ರಚೋದಿಸು.