See also 2trail
1trail ಟ್ರೇಲ್‍
ನಾಮವಾಚಕ
  1. ಒಂದರ ಹಿಂದೆ (ಎಳೆದುಕೊಂಡು) ಹೋಗುತ್ತಿರುವ ಭಾಗ; (ಉದ್ದವಾದ) ಹಿಂಜೋಲು; ಬಾಲ; ತೋಕೆ: the engine left a trail of smoke behind it ರೈಲ್ವೆ ಎಂಜಿನು ಹೊಗೆಯ ಹಿಂಜೋಲನ್ನು ಹಿಂದೆಬಿಟ್ಟು ಹೋಯಿತು.
  2. ಫಿರಂಗಿ ಗಾಡಿಯ ಹಿಂತುದಿ.
  3. (ಮುಂದಕ್ಕೆ ಹೋದ ಯಾ ಮುಂದಕ್ಕೆ ಎಳೆದೊಯ್ಯಲಾದ ವಸ್ತು) ನೆಲದ ಮೇಲೆ ಬಿಟ್ಟ ಗುರುತು; ಹಿಂದೆಬಿಟ್ಟ ಗುರುತು ಯಾ ಜಾಡು: vandals left a trail of wreckage ವಿಧ್ವಂಸಕರು ಭಗ್ನಾವಶೇಷಗಳ ಗುರುತು ಬಿಟ್ಟು ಹೋದರು.
  4. (ಬೇಟೆಗಾರರು ಅನುಸರಿಸಿ ಹೋಗುವ) ಮೃಗದ–ಜಾಡು, ವಾಸನೆ, ಸುಳಿವು.
  5. (ಮುಖ್ಯವಾಗಿ ಕಾಡು ಪ್ರದೇಶದಲ್ಲಿ) ನಡೆದಾಡಿದ ದಾರಿ; ಕಾಲುದಾರಿ; ತುಳಿದ ಹಾದಿ.
ಪದಗುಚ್ಛ
  1. at the trail (ಸೈನ್ಯ) ಬಂದೂಕಗಳನ್ನು ನೆಲಕ್ಕೆ ಸಮಾನಾಂತರವಾಗಿ (ಬಲಗೈಯಲ್ಲಿ) ಇಳಿಬಿಟ್ಟು, ಜೋತುಹಿಡಿದು.
  2. off the trail ಜಾಡುತಪ್ಪಿ.
  3. on the trail ಜಾಡಿನಲ್ಲಿ; ಜಾಡು ಹಿಡಿದು.
  4. the trail of a meteor ಉಲ್ಕೆಯ ಬಾಲ.