See also 1trace  3trace
2trace ಟ್ರೇಸ್‍
ನಾಮವಾಚಕ
  1. (ವ್ಯಕ್ತಿಯ ಯಾ ಪ್ರಾಣಿಯ) ಹೆಜ್ಜೆ ಗುರುತು; ಜಾಡು; ಕುರುಹು.
  2. (ಮುಖ್ಯವಾಗಿ ಬಹುವಚನದಲ್ಲಿ) ಪಾದದ ಗುರುತು; ನಡೆದುಕೊಂಡು ಹೋದ ಗುರುತು.
  3. ಜಾಡು:
    1. ಕ್ಯಾಥೋಡ್‍ ಕಿರಣ ನಳಿಕೆಯ ಮೇಲೆ ಚಲಿಸುವ ಬಿಂದುವೊಂದರ ಪಥವನ್ನು ತೋರಿಸುವ ಗೆರೆ.
    2. ಸಮತಲದ ಮೇಲೆ ವಕ್ರವೊಂದರ ಪ್ರಕ್ಷೇಪಣ.
  4. ಕಲಿಕೆ ಪ್ರಕ್ರಿಯೆಯ ಫಲವಾಗಿ ಮಿದುಳಿನಲ್ಲಾಗುವ ಮಾರ್ಪಾಡು, ವ್ಯತ್ಯಾಸ, ಬದಲಾವಣೆ.
  5. (ಯಾವುದರದೇ) ಅವಶೇಷ; ಯಾವುದೇ ಒಂದು ಇದ್ದುದರ - ಗುರುತು, ಸುಳಿವು, ಚಿಹ್ನೆ: of these buildings no traces remain ಈ ಕಟ್ಟಡಗಳ ಯಾವ ಅವಶೇಷವೂ ಉಳಿದಿಲ್ಲ. sorrow has left its traces on her face ಅವಳ ವ್ಯಥೆ ಮುಖದ ಮೇಲೆ ಗುರುತುಗಳನ್ನು ಉಳಿಸಿ ಹೋಗಿದೆ.
  6. ತುಸ; ಕೊಂಚ; ರವಷ್ಟು: contains traces of soda ಕೊಂಚ ಸೋಡಾ ಬೆರೆತ ಚಿಹ್ನೆಗಳಿವೆ.
  7. (ಮಳೆ, ವಸ್ತು, ಮೊದಲಾದವುಗಳ ವಿಷಯದಲ್ಲಿ) (ಅಳತೆಗೆ ಸಿಕ್ಕದಷ್ಟು) ಕಡಮೆ ಪ್ರಮಾಣ; ಅತ್ಯಲ್ಪ ಪ್ರಮಾಣ.
  8. ಉಪಕರಣ ಮೊದಲಾದವುಗಳ ಚಲಿಸುತ್ತಿರುವ ಲೇಖನಿ ಮಾಡಿದ ರೇಖೆ, ಗೆರೆ.
ಪದಗುಚ್ಛ

vanish without trace ಹೇಳ ಹೆಸರಿಲ್ಲದಂತಾಗು; ಸಂಪೂರ್ಣ ಕಣ್ಮರೆಯಾಗು; ಅದೃಶ್ಯವಾಗು.