See also 2trace  3trace
1trace ಟ್ರೇಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಶ್ರಮಪಟ್ಟು) ನಿರೂಪಿಸು; ಬರೆ: trace out a plan of the district ಜಿಲ್ಲೆಯ ಯೋಜನೆಯೊಂದನ್ನು ಬರೆ(ದು ಸಿದ್ಧಪಡಿಸು).
  2. ರಚಿಸು; ರೂಪಿಸು; ಸಿದ್ಧಪಡಿಸು: the policy he traced was never followed ಅವನು ರೂಪಿಸಿದ ಕಾರ್ಯನೀತಿ ಯಾ ಧೋರಣೆಯನ್ನು ಅನುಸರಿಸಲೇ ಇಲ್ಲ.
  3. (ನಕ್ಷೆ, ಪ್ರತಿ, ಮೊದಲಾದವನ್ನು) (ಮೂಲದ ಮೇಲೆ ಯಾ ಕೆಳಗೆ ಇಟ್ಟ ಕಾಗದದ ಮೇಲೆ) ತಿದ್ದು; ಪ್ರತಿ ಮಾಡು.
  4. (ಮನುಷ್ಯ, ಪ್ರಾಣಿ, ಹೆಜ್ಜೆ, ಮೊದಲಾದವುಗಳ) ಜಾಡು ಹಿಡಿದು ಹೋಗು; ಗುರುತು ಅನುಸರಿಸಿ ಹೋಗು.
  5. (ಅವಶೇಷಗಳ ಆಧಾರದ ಮೇಲೆ, ಹಿಂದಿನ ಕಾಲದ ರಸ್ತೆ, ಗೋಡೆ, ಮೊದಲಾದವುಗಳ) ನೆಲೆ, ಅಳತೆ, ಮೊದಲಾದವನ್ನು–ಗೊತ್ತುಮಾಡು, ನಿರ್ಣಯಿಸು.
  6. ಅನ್ವೇಷಣೆಯ ಮೂಲಕ ಗುರುತು, ಸುಳಿವು, ಕುರುಹು–ಕಾಣು, ಕಂಡುಹಿಡಿ, ಪತ್ತೆ ಹಚ್ಚು: his resentment can be clearly traced in many passages ಅವನ ಅಸಮಾಧಾನವನ್ನು ಅವನ ಅನೇಕ ವಾಕ್ಯಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. cannot trace any letter of that date ಆ ತಾರೀಖಿನ ಯಾವ ಕಾಗದವನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ; ಆ ತಾರೀಖಿನ ಯಾವ ಕಾಗದವೂ ಸಿಕ್ಕಿಲ್ಲ.
  7. ತನ್ನ ದಾರಿ ಹಿಡಿದು ನಡೆ, ಹೋಗು; ಮಾರ್ಗ ಅನುಸರಿಸು.
ಪದಗುಚ್ಛ
  1. trace back (ಒಂದರ) ಮೂಲವನ್ನು ಗುರ್ತಿಸು, ಪತ್ತೆ ಹಚ್ಚು; ಮೂಲ ಗುರುತಿಸುತ್ತ ಹಿಂದಕ್ಕೆ ಹೋಗು: the report has been traced back to you (ಸುದ್ದಿ) ವರದಿ ನಿನ್ನಿಂದ ಹೊರಟಿತೆಂದು ಪತ್ತೆ ಹಚ್ಚಲಾಗಿದೆ.
  2. trace out ಬರೆ; ರೇಖಿಸು; ಗುರುತಿಸು; ನಿರೂಪಿಸು; ಚಿತ್ರಿಸು.
  3. trace over (ನಕ್ಷೆ) ಪ್ರತಿ ಮಾಡು.