See also 2total  3total
1total ಟೋಟಲ್‍
ಗುಣವಾಚಕ
  1. (ಎಲ್ಲಾ) ಒಟ್ಟು; ಎಲ್ಲಾ ಸೇರಿ: the total number of persons ಒಟ್ಟು ಜನರ ಸಂಖ್ಯೆ.
  2. ಸಂಪೂರ್ಣ; ತೀರಾ; ಪೂರಾ: was in total ignorance of it ಆ ವಿಷಯ ಅವನಿಗೆ ಕೊಂಚವೂ ತಿಳಿದಿರಲಿಲ್ಲ.
ಪದಗುಚ್ಛ
  1. total abstainer ಸಂಪೂರ್ಣವಾಗಿ ಮದ್ಯ ವರ್ಜಿಸಿರುವವನು.
  2. total abstinence ಮದ್ಯದ ಪೂರ್ಣವರ್ಜನೆ.
  3. total eclipse ಪೂರ್ಣಗ್ರಹಣ; ಗ್ರಹಣಕ್ಕೆ ಒಳಗಾಗಿರುವ ಆಕಾಶಕಾಯದ ಬಿಂಬವು ಪೂರ್ತಿಯಾಗಿ ಕಾಣದಿರುವಿಕೆ.
  4. total internal reflection (ಭೌತವಿಜ್ಞಾನ) ಸಂಪೂರ್ಣ ಆಂತರಿಕ ಪ್ರತಿಫಲನ; ಎರಡು ಮಾಧ್ಯಮಗಳ ನಡುವಣ ಅಂತರಮುಖದ ಮೇಲೆ ಕ್ರಾಂತಿಕೋನಕ್ಕಿಂತ ಅಧಿಕ ಕೋನದಲ್ಲಿ ಎರಗಿದುದರ ಪರಿಣಾಮವಾಗಿ, ಬೆಳಕಿನ ರಶ್ಮಿಯು ವಕ್ರೀಕರಣಕ್ಕೊಳಗಾಗದೆ ಪೂರ್ತಿಯಾಗಿ ಪ್ರತಿಫಲನಗೊಳ್ಳುವುದು.
  5. total recall ಸಂಪೂರ್ಣ ನೆನಪಿನ ಶಕ್ತಿ; ಸಂಪೂರ್ಣ ನೆನಪು; ಸಂಪೂರ್ಣ ಸ್ಮರಣಶಕ್ತಿ; ತನ್ನ ಅನುಭವದ ಪ್ರತಿ ವಿವರವನ್ನೂ ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಬಲ್ಲ ಶಕ್ತಿ.
  6. total war ಸಂಪೂರ್ಣ ಸಮರ; ಲಭ್ಯವಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನೂ, ಸಂಪನ್ಮೂಲಗಳನ್ನೂ ಪ್ರಯೋಗಿಸಿ ನಡೆಸುವ ಯುದ್ಧ.