See also 1toe
2toe ಟೋ
ಸಕರ್ಮಕ ಕ್ರಿಯಾಪದ
  1. (ಕಾಲುಚೀಲ ಮೊದಲಾದವುಗಳ) ಬೆರಳಭಾಗವನ್ನು, ಮುಂಭಾಗವನ್ನು–ಅಳವಡಿಸು ಯಾ ದುರಸ್ತು ಮಾಡು.
  2. (ಓಟದ ಪಂದ್ಯ ಪ್ರಾರಂಭಿಸುವಾಗ) ಪ್ರಾರಂಭ ಗೆರೆಗೆ ಕಾಲ್ಬೆರಳು ಸೋಕುವಂತೆ ನಿಲ್ಲು.
  3. (ಗಾಲ್ಫ್‍) (ಚೆಂಡನ್ನು) ದಾಂಡಿನ ಮುಂತುದಿಯಿಂದ ಹೊಡೆ.
ಪದಗುಚ್ಛ
    1. toe in (or out) ಕಾಲ್ಬೆರಳನ್ನು ಒಳಮಡಿಚಿ (ಯಾ ಹೊರಚಾಚಿ) ನಡೆ.
    2. (ವಾಹನಗಳ ಚಕ್ರಗಳ ವಿಷಯದಲ್ಲಿ) ಮುಂಭಾಗದಲ್ಲಿ ಸ್ವಲ್ಪ ಪರಸ್ಪರ ಹತ್ತಿರ ಬರು (ಯಾ ದೂರವಾಗು).
  1. toe the line (or ಅಮೆರಿಕನ್‍ ಪ್ರಯೋಗ the mark) (ರೂಪಕವಾಗಿ) (ಒಂದು ಪಕ್ಷದ ಅಗತ್ಯಗಳಿಗೆ ಮಣಿದು, ನಿರ್ಬಂಧದಿಂದ) ಪಕ್ಷದ ನೀತಿ ಯಾ ಮಾರ್ಗವನ್ನು ಅನುಸರಿಸು.