See also 2toe
1toe ಟೋ
ನಾಮವಾಚಕ
  1. ಕಾಲ್ಬೆರಳು; ಪಾದಾಂಗುಲಿ.
  2. ಕಾಲ್ಬೆರಳ ಭಾಗ; ಕಾಲ್ಬೆರಳುಗಳನ್ನು ಮುಚ್ಚುವ (ಪಾದರಕ್ಷೆ, ಕಾಲುಚೀಲ, ಮೊದಲಾದವುಗಳ) ಭಾಗ.
  3. (ಪ್ರಾಣಿಯ) ಮುಂಗೊರಸು; ಗೊರಸಿನ ಮುಂಭಾಗ.
  4. ಲಾಳದ ಮುನ್‍ತುಂಡು; ಕುದುರೆ ಜಾರದಂತೆ ಲಾಳದ ಮುಂದೆ ಕೆಳಗಡೆ ಹಾಕಿರುವ, ಕಬ್ಬಿಣದ ತುಂಡು.
  5. ಕಾಲುಹೆಬ್ಬೆರಳಿನ ಆಕಾರದ ಯಾ ಸ್ಥಾನದಲ್ಲಿರುವ ವಸ್ತು.
  6. (ವಾಸ್ತುಶಿಲ್ಪ) ಅಡಿಚಾಚು; ಊರೆಗೋಡೆ ಮೊದಲಾದವುಗಳ ಬಉಡದ ಭದ್ರತೆಗಾಗಿ ಹಾಕಿದ ಮುಂಚಾಚು.
  7. ಗಾಲ್ಫ್‍ ದಾಂಡಿನ (ತಲೆಯ, ತುದಿಯ) ಚಾಚು.
  8. (ಉಪಕರಣ, ಸಲಕರಣೆ, ಮೊದಲಾದವುಗಳ) ಅಡಿ; ಕೆಳತುದಿ.
ಪದಗುಚ್ಛ
  1. on one’s toes
    1. ಎಚ್ಚರಿಕೆಯಿಂದ; ಜಾಗರೂಕತೆಯಿಂದ.
    2. ಸಿದ್ಧವಾಗಿ; ನಿರೀಕ್ಷೆಯಿಂದ.
  2. the light fantastic toe (ಹಾಸ್ಯ ಪ್ರಯೋಗ) ನೃತ್ಯ.
  3. turn up one’s toes (ಆಡುಮಾತು) ಸಾಯು; ಮೃತನಾಗು.