See also 2tide
1tide ಟೈಡ್‍
ನಾಮವಾಚಕ
  1. ಋತು; ಕಾಲ; ಹೊತ್ತು; ಸಮಯ; (ಈಗ ಪ್ರಾಚೀನ ಪ್ರಯೋಗ: Christmas-tide, yule-tide, ಮೊದಲಾದ ಸಂಯುಕ್ತಪದಗಳಲ್ಲಿ ಮಾತ್ರ).
    1. ಉಬ್ಬರವಿಳಿತ; ಭರತವಿಳಿತ; ಚಂದ್ರಸೂರ್ಯರ ಆಕರ್ಷಣದಿಂದ ಸಮುದ್ರನೀರಿನಲ್ಲಿ ಉಂಟಾಗುವ ಏಳುಬೀಳುಗಳು.
    2. ಉಬ್ಬರವಿಳಿತದ ನೀರು; ಭರತದ ಪ್ರವಾಹ.
  2. (ರೂಪಕವಾಗಿ)(ಅಭಿಪ್ರಾಯ, ಅದೃಷ್ಟ, ಘಟನೆ, ಮೊದಲಾದವುಗಳ) ಓಟ; ಗತಿ; ಪ್ರವಾಹ: go with the tide ಜನಾಭಿಪ್ರಾಯಕ್ಕೆ ಅನುಸಾರವಾಗಿ ನಡೆ, ಜನಾಭಿಪ್ರಾಯದ ಅಲೆಯತ್ತ ಸಾಗು, ದಿಕ್ಕಿನಲ್ಲಿ ಹೋಗು.
ಪದಗುಚ್ಛ
  1. go against the tide ಜನಾಭಿಪ್ರಾಯಕ್ಕೆ ವಿರುದ್ಧವಾಗಿ ನಡೆ, ಹೋಗು.
  2. meteorological tide ವಾಯುವಿನ ಉಬ್ಬರವಿಳಿತ; ಗಾಳಿ ಮೊದಲಾದವುಗಳ ಪರ್ಯಾಯ ಕ್ರಮದ ಬದಲಾವಣೆಗಳಿಂದ ಉಂಟಾಗುವ ಉಬ್ಬರವಿಳಿತ.
  3. the tide is in ನೀರಿನ ಮಟ್ಟ ಏರಿದೆ.
  4. the tide is out ನೀರಿನ ಮಟ್ಟ ಇಳಿದಿದೆ.
  5. roll back the tide of war ಕದನದ ಗತಿಯನ್ನು ಬದಲಾಯಿಸು.
  6. work double tides ಎರಡು ಹೊತ್ತೂ, ಹಗಲಿರಳೂ–ಕೆಲಸ ಮಾಡು; ಒಂದಕ್ಕೆ ಎರಡರಷ್ಟು ಕಾಲ ದುಡಿ, ಶ್ರಮಿಸು.