See also 2there  3there
1there ದೇರ್‍
ಕ್ರಿಯಾವಿಶೇಷಣ
  1. ಅಲ್ಲಿ; ಆ ಸ್ಥಳದಲ್ಲಿ; ಆ ಕಡೆ; ಆ ಎಡೆಯಲ್ಲಿ: put it there ಅದನ್ನು ಅಲ್ಲಿಡು. lived there ಅಲ್ಲಿ ವಾಸವಾಗಿದ್ದೆ.
  2. (ಮಾತು, ಬರವಣಿಗೆ, ಕಾರ್ಯ, ಮೊದಲಾದವುಗಳ ವಿಷಯದಲ್ಲಿ) ಅಲ್ಲಿ; ಆ ಸಂದರ್ಭದಲ್ಲಿ; ಆ ಜಾಗದಲ್ಲಿ: there he stopped ಆ ಜಾಗದಲ್ಲಿ ಅವನು ನಿಲ್ಲಿಸಿದ.
  3. ಆ ಬಗ್ಗೆ; ಅದನ್ನು ಕುರಿತಂತೆ: there I agree with you ಆ ವಿಷಯದಲ್ಲಿ ನಿಮ್ಮ ಮಾತು ಒಪ್ಪುತ್ತೇನೆ.
  4. ಅಲ್ಲಿಗೆ; ಆ ಸ್ಥಳಕ್ಕೆ: goes there everyday ಪ್ರತಿದಿನ ಅಲ್ಲಿಗೆ ಹೋಗುತ್ತಾನೆ.
  5. (ಗಮನ ಸೆಳೆಯುವಲ್ಲಿ ಒತ್ತಿ ಹೇಳುವುದಕ್ಕಾಗಿ) ಎಲಾ! ಏಯ್‍: hallo there!, you there! ಏಯ್‍ ನೀನು! ಎಲಾ ನೀನು! move along there! ಏಯ್‍, ಮುಂದಕ್ಕೆ ನಡಿ, ಸಾಗು: there goes the bell! ಅಗೋ! ಗಂಟೆ ಬಾರಿಸುತ್ತಿದೆ!
  6. ಯಾವುದೋ ಒಂದು ಇದೆ ಎಂದು ಸೂಚಿಸಲು: there was a cart close by ಆ ಹತ್ತಿರದಲ್ಲೇ ಒಂದು ಗಾಡಿ ಇತ್ತು. there was plenty to eat ತಿನ್ನಲು ಬೇಕಾದಷ್ಟಿತ್ತು. a fool there was (ಅಲ್ಲೊಬ್ಬ) ಅವನೊಬ್ಬ ಅವಿವೇಕಿ! a nice mess there! ಆ! ಎಂಥ ತೊಳಸಂಬಟ್ಟೆ!
ಪದಗುಚ್ಛ
  1. get there (ಅಶಿಷ್ಟ)
    1. ಜಯಶಾಲಿಯಾಗು
    2. ಹೇಳಿದ್ದನ್ನು ಅರ್ಥಮಾಡಿಕೊ.
  2. have been there before (ಅಶಿಷ್ಟ) ನನಗೆ ಅದೆಲ್ಲಾ ಚೆನ್ನಾಗಿ ಗೊತ್ತು.
  3. so there (ಆಡುಮಾತು) ನೀನು ಒಪ್ಪು, ಬಿಡು, ಅದು ನನ್ನ ಅಂತಿಮ ತೀರ್ಮಾನ.
  4. 1then and there.
  5. there it is
    1. ಅಲ್ಲೇ (ಆ ವಿಷಯದಲ್ಲೇ) ಕಷ್ಟ ಬರೋದು!
    2. ಅದರ ಬಗ್ಗೆ ಏನೂ ಮಾಡುವಂತಿಲ್ಲ!
  6. there or thereabouts ಅಲ್ಲಿ; ಆ ಸುಮಾರಿನಲ್ಲಿ; ಆ ಹೊತ್ತಿಗೆ; ಆ ಸುಮಾರಿನ ಮೊತ್ತ: ‘was it two years ago?’ ‘there or thereabouts’ ಅದು ನಡೆದು ಎರಡು ವರ್ಷ ಆಯಿತು, ಅಲ್ಲವೇ? ಹೌದು, ಸರಿಸುಮಾರು (ಅಷ್ಟು ಕಾಲ) ಆಗಿರಬಹುದು.