See also 2target  3target
1target ಟಾರ್ಗಿಟ್‍
ನಾಮವಾಚಕ
  1. ಗುರಿಹಲಗೆ; ಲಕ್ಷ್ಯಫಲಕ; (ಬಿಲ್ಲು, ಬಂದೂಕು, ಮೊದಲಾದವನ್ನು ಹೊಡೆಯುವ ಅಭ್ಯಾಸದಲ್ಲಿ ಬಳಸುವ) ಸಮಾನ ಕೇಂದ್ರದ ವೃತ್ತಗಳನ್ನು ಗುರುತಿಸಿದ, ಮುಖ್ಯವಾಗಿ ವರ್ತುಲಾಕಾರದ, ಗುರಿಹಲಗೆ.
  2. ಲಕ್ಷ್ಯ; ಗುರಿ; ಈಡು; (ಬಂದೂಕು ಮೊದಲಾದವುಗಳ ಹೊಡೆತದಲ್ಲಿ) ಹೀಗೆ ಗುರಿ ಇಟ್ಟು ಹೊಡೆದ ಯಾ ಹೊಡೆಯಲುದ್ದೇಶಿಸಿದ ವಸ್ತು, ವ್ಯಕ್ತಿ, ಮೊದಲಾದವರು: they were on easy target ಅವು ಸುಭ(ವಾಗಿ ಹೊಡೆಯಬಹುದಾದ) ಗುರಿಯಾಗಿದ್ದವು.
  3. ಗುರಿವಸ್ತು; ಕಣಗಳನ್ನು ಗುರಿ ಇಟ್ಟು ಹೊಡೆಯುವ (ಉದಾಹರಣೆಗೆ ‘ಕ್ಷ’ ಕಿರಣಗಳ ಉತ್ಪಾದನೆಯಲ್ಲಿ) ವಸ್ತು.
  4. ಸಾಧಿಸಲುದ್ದೇಶಿಸಿದ ಗುರಿ, ಕನಿಷ್ಠ ಫಲಿತಾಂಶ, ಮೊದಲಾದವು: export target ರಫ್ತಿನ ಗುರಿ; ಸಾಧಿಸಬೇಕಾದ ರಪ್ತು ವ್ಯಾಪಾರದ ಪ್ರಮಾಣ. savings target ಉಳಿತಾಯದ ಗುರಿ; ಉಳಿತಾಯ ಯೋಜನೆಯಿಂದ ಕೂಡಿಸಬೇಕಾಗಿರುವ ಹಣದ ಮೊತ್ತ. our target date is next July ನಾವು ಗುರಿಸಾಧಿಸಬೇಕಾದ ಕೊನೆಯ ತಾರೀಖು ಮುಂದಿನ ಜುಲೈ ತಿಂಗಳು.
  5. (ತಿರಸ್ಕಾರ, ಲೇವಡಿ, ಮೊದಲಾದವಕ್ಕೆ) ಗುರಿಯಾದ ವ್ಯಕ್ತಿ, ವಸ್ತು, ವಿಷಯ, ಮೊದಲಾದವು.
  6. ವರ್ತುಲಾಕಾರದ, ರೈಲ್ವೆ ಸಿಗ್ನಲ್‍ ಯಾ ಗುರುತು (ಉದಾಹರಣೆಗೆ ಸನ್ನೆಯ, ಸ್ವಿ-ಚ್ಚಿನ ಬಳಿಯಲ್ಲಿರುವಂಥದು).
  7. ಕುರಿಮರಿಯ ಕುತ್ತಿಗೆಯ ಮತ್ತು ಎದೆಯ ಮಾಂಸದ ತುಂಡು.
  8. (ಪ್ರಾಚೀನ ಪ್ರಯೋಗ) = targe.