See also 1swing
2swing ಸ್ವಿಂಗ್‍
ನಾಮವಾಚಕ
  1. ತೂಗಾಟ; ಓಲಾಟ; ಜೋಲಾಟ; ತೊನೆದಾಟ; ಉಯ್ಯಲಾಟ; ಆಂದೋಲನ:
    1. ಓಲಾಡುವುದು; ತೂಗಾಡುವುದು.
    2. ಓಲಾಡುವ; ತೂಗಾಡುವ – ಚಲನೆ.
    3. ತೂಗಾಟದ, ಆಂದೋಲನದ – ಪ್ರಮಾಣ, ವಿಸ್ತಾರ, ಹರವು.
  2. (ಅಮೆರಿಕನ್‍ ಪ್ರಯೋಗ) ವೃತ್ತಾಕಾರದ ಪ್ರವಾಸ; ಸುತ್ತು.
  3. ಜಗ್ಗು ಯಾ ಸಲೀಸಾದ – ಹೆಜ್ಜೆ, ನಡೆ, ನಡಗೆ, ಗತಿ: he goes with a swing ಅವನು ಜಗ್ಗು ಹೆಜ್ಜೆಯಿಂದ ನಡೆಯುತ್ತಾನೆ.
  4. ರಭಸದಿಂದ ನಡೆಯುತ್ತಿರುವ, ಸಾಗುತ್ತಿರುವ, ಕೆಲಸ, ಕಾರ್ಯ.
  5. (ಸಂಗೀತ)
    1. ದ್ರುತಗತಿ; ತೀವ್ರಧಾಟಿ.
    2. ಸರಾಗವಾದ ನಡೆ.
  6. (ಸಂಗೀತ)
    1. ಸರಾಗವಾಗಿ ಸಾಗುವ ನಡೆಯುಳ್ಳ, ಸುಲಭಗತಿಯ – ಜಾಸ್‍ ಸಂಗೀತ ಯಾ ನೃತ್ಯ ಸಂಗೀತ.
    2. ಈ ಸಂಗೀತದ ಲಯ-ಭಾವ ಯಾ ಪ್ರಭಾವ.
  7. ಉಯ್ಯಾಲೆ; ಜೋಕಾಲಿ; ಜೋಲಿ; ಜೋಗಲೆ; ಆಂದೋಲಿಕೆ; ಉಯ್ಯಾಲೆಯಾಡಲು ಹಗ್ಗಗಳಿಂದಲೋ ಸರಪಣಿಗಳಿಂದಲೋ ತೂಗುಬಿಟ್ಟಿರುವ ಮಣೆ, ತೊಟ್ಟಿಲು, ಮೊದಲಾದವು.
  8. ಉಯ್ಯಾಲೆಯಾಟ; ಜೋಕಾಲಿಯಾಟ; ಉಯ್ಯಾಲೆಯಲ್ಲಿ ತೂಗಿಕೊಳ್ಳುವುದು.
  9. (ಲೋಲಕದ ವಿಷಯದಲ್ಲಿ) ತೂಗಾಟದ ದೂರ, ವ್ಯಾಪ್ತಿ; ತೂಗುದೂರ; ಆಂದೋಲನ – ದೂರ, ವ್ಯಾಪ್ತಿ.
  10. ಅಭಿಪ್ರಾಯದ – ಬದಲಾವಣೆ, ವ್ಯತ್ಯಾಸ; ಮುಖ್ಯವಾಗಿ ಓಟುಗಳು ಯಾ ಗೆಲ್ಲಂಕಗಳು ಮೊದಲಾದವು ಒಂದು ಪಕ್ಷದಿಂದ ಇನ್ನೊಂದಕ್ಕೆ ಬದಲಾಯಿಸಿದ, ಹೋದ ಪ್ರಮಾಣ.
ಪದಗುಚ್ಛ
  1. in full swing ಪೂರ್ಣ ಭರದಿಂದ, ರಭಸದಿಂದ: the work is going on in full swing ಕೆಲಸ ಪೂರ್ಣ ರಭಸದಿಂದ ನಡೆಯುತ್ತಿದೆ.
  2. swing of the pendulum.
  3. swings and round-abouts ಯಥಾಸ್ಥಿತಿ; ಒಟ್ಟಿನಲ್ಲಿ ವೃದ್ಧಿಹ್ರಾಸಗಳಿಲ್ಲದ, ಲಾಭವಾಗಲಿ ನಷ್ಟವಾಗಲಿ ಇಲ್ಲದ ಪರಿಸ್ಥಿತಿ.