See also 2swing
1swing ಸ್ವಿಂಗ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ swung ಉಚ್ಚಾರಣೆ ಸ್ವಂಗ್‍).
ಸಕರ್ಮಕ ಕ್ರಿಯಾಪದ
  1. (ಒಂದು ತುದಿಯನ್ನು ಬಿಗಿದು, ಇನ್ನೊಂದನ್ನು ಹರಿದಾಡುವಂತೆ ಬಿಟ್ಟಿರುವ ವಸ್ತುವನ್ನು) ತೂಗಾಡಿಸು; ಓಲಾಡಿಸು; ಉಯ್ಯಲಾಡಿಸು; ತೊನೆದಾಡಿಸು.
  2. ಓಲಾಡಿಸು; ನೇತಾಡಿಸು; ಆಂದೋಲಿಸು.
  3. (ಸರಾಗವಾಗಿ ಓಲಾಡುವಂತೆ) ನೇತು ಹಾಕು; ತೂಗಹಾಕು.
  4. ಓಲಾಡುವಂತೆ, ತೂಗಾಡುವಂತೆ – ಮಾಡು.
  5. (ತೋಳು, ಆಯುಧ, ಮೊದಲಾದವನ್ನು) ಬೀಸು.
  6. ಸುತ್ತು ಸುತ್ತಿಸು; ತಿರುಗಿಸು; ಸುತ್ತು ತಿರುಗುವಂತೆ, ಪರಿಭ್ರಮಿಸುವಂತೆ ಮಾಡು.
  7. (ಸಂಗೀತ) (ರಾಗ, ಕೃತಿಯನ್ನು) ದ್ರುತಗತಿಯಲ್ಲಿ, ಲಂಘನಗತಿಯಲ್ಲಿ – ನುಡಿಸು, ಬಾರಿಸು.
  8. (ಮತದಾನ ಮೊದಲಾದವುಗಳ ಮೇಲೆ) ನಿರ್ಣಾಯಕ – ಪ್ರಭಾವ ಬೀರು, ಪರಿಣಾಮ ಉಂಟುಮಾಡು.
  9. (ಯಾವುದನ್ನೇ) ಚೆನ್ನಾಗಿ, ಯಶಸ್ವಿಯಾಗಿ – ನಿರ್ವಹಿಸು.
  10. (ಕ್ರಿಕೆಟ್‍) (ಚೆಂಡನ್ನು) ಆಕಾಶದಲ್ಲಿ – ಸುತ್ತುವಂತೆ, ದಿಕ್ಕು ಬದಲಾಯಿಸುವಂತೆ – ಮಾಡು, ಎಸೆ.
ಅಕರ್ಮಕ ಕ್ರಿಯಾಪದ
  1. (ಒಂದು ತುದಿಯನ್ನು ಬಿಗಿದು, ಇನ್ನೊಂದು ತುದಿಯನ್ನು ಹರಿದಾಡುವಂತೆ ಬಿಟ್ಟಿರುವ ವಸ್ತುವಿನ ವಿಷಯದಲ್ಲಿ) ತೂಗಾಡು; ಓಲಾಡು; ಉಯ್ಯಲಾಡು; ತೊನೆದಾಡು; ಒಂದು ಪಕ್ಕದಿಂದ ಮತ್ತೊಂದು ಪಕ್ಕಕ್ಕೆ ಯಾ ವಕ್ರಾಕೃತಿಯಲ್ಲಿ – ಸಾಗು, ಚಲಿಸು.
  2. ತೂಗಾಡು; ಓಲಾಡು; ಜೋಲಾಡು; ನೇತಾಡು; ಆಂದೋಲವಾಗು.
  3. (ಸರಾಗವಾಗಿ ಓಲಾಡುವಂತೆ) ತೂಗು; ತೂಗು ಬೀಳು; ನೇಲು; ತೊಂಗು; ತೊನೆ; ನೇತು ಬೀಳು.
  4. (ಚಕ್ರ, ಕದ, ಮೊದಲಾದವುಗಳ ವಿಷಯದಲ್ಲಿ) ಸುತ್ತು; ತಿರುಗು; ಪರಿಭ್ರಮಿಸು: company swings into line ಸೈನ್ಯದಳ ಸಾಲುಗೂಡುವಂತೆ ಸುತ್ತು ತಿರುಗುತ್ತದೆ.
  5. (ಯಾವುದೇ ಒಂದನ್ನು) ಭದ್ರವಾಗಿ ಹಿಡಿದುಕೊಂಡು ನೆಗೆಯುತ್ತಾ, ಹಾರುತ್ತಾ – ಚಲಿಸು, ಹೋಗು, ಸಾಗು: swung from tree to tree ಮರದಿಂದ ಮರಕ್ಕೆ ನೆಗೆಯುತ್ತಾ ಸಾಗಿತು.
  6. ಜಗ್ಗುತ್ತಾ, ಓಲಾಡುತ್ತಾ – ನಡೆ: swung out of the room ಜಗ್ಗುತ್ತಾ, ಜಗ್ಗು ಹೆಜ್ಜೆ ಹಾಕುತ್ತಾ ರೂಮಿನಿಂದ ಹೋದ, ಕೋಣೆಯಾಚೆಗೆ ನಡೆದ.
  7. ಎದುರು ಕಡೆಗೆ, ವಿರುದ್ಧ ದಿಕ್ಕಿಗೆ ಹೋಗು.
  8. ಅಭಿಪ್ರಾಯ, ಮನೋಭಾವ, ಮನೋದೃಷ್ಟಿ – ಬದಲಾಯಿಸು.
  9. ಹೊಡೆಯಲು ಯಾ ಗುದ್ದಲು ಪ್ರಯತ್ನಿಸು.
  10. (ಸಂಗೀತ) (ನಡೆ, ರಾಗ, ಮೊದಲಾದವುಗಳ ವಿಷಯದಲ್ಲಿ) ತೀವ್ರ ಧಾಟಿಯಲ್ಲಿ, ದ್ರುತಗತಿಯಲ್ಲಿ – ನುಡಿಸು, ಬಾರಿಸು, ವಾದನಮಾಡು.
  11. (ಆಡುಮಾತು)
    1. ಲವಲವಿಕೆಯಿಂದಿರು.
    2. ಆಧುನಿಕವಾಗಿರು; ನವನಾಗರಿಕವಾಗಿರು.
    3. ಸ್ವೇಚ್ಛಾಚಾರಿಯಾಗಿರು; ಸ್ವಚ್ಛಂದ ವೃತ್ತಿಯವನಾಗಿರು; ಸ್ವೈರನಾಗಿರು; ಲಂಪಟನಾಗಿರು.
    4. ಮಜಾ ಮಾಡು; ಖುಷಿ ಪಡು; ಸಂತೋಷ ಪಡು; ನಲಿ; ಸುಖ ಅನುಭವಿಸು.
  12. (ಆಡುಮಾತು) (ಸಂತೋಷಕೂಟ ಮೊದಲಾದವುಗಳ ವಿಷಯದಲ್ಲಿ) ಲವಲವಿಕೆಯಾಗಿರು; ಯಶಸ್ವಿಯಾಗು.
  13. (ಆಡುಮಾತು) ಗಲ್ಲಿಗೇರು; ನೇಣುಗಂಬದಿಂದ ತೂಗು; ನೇಣು ಶಿಕ್ಷೆಗೆ ಒಳಗಾಗು.
  14. (ಕ್ರಿಕೆಟ್‍) (ಚೆಂಡಿನ ವಿಷಯದಲ್ಲಿ) (ಆಕಾಶ ದಲ್ಲಿ) ತಿರುಗು; ನೇರ ಚಲನೆ ಬದಲಾಯಿಸು; ನೇರ ಹಾದಿಯನ್ನು, ದಿಕ್ಕನ್ನು -ಬದಲಾಯಿಸು, ಬಿಟ್ಟು ಅರುಗಾಗು.
ಪದಗುಚ್ಛ
  1. swing at ತೋಳು, ಮುಷ್ಟಿ, ಆಯುಧ, ಮೊದಲಾದವನ್ನು – ಬೀಸು, ಬೀಸಿ ಹೊಡೆಯಲು ಯತ್ನಿಸು.
  2. swing it = 1swing ( akamaRka kirxyApada೧೦).
  3. swing round ಥಟ್ಟನೆ (ಬೇರೆ ದಿಕ್ಕಿಗೆ) ತಿರುಗು.
  4. swing the lead (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಕೆಲಸಕ್ಕೆ ಹಿಂದೇಟು ಹಾಕು, ಕಳ್ಳ ತಪ್ಪಿಸಿಕೊ.