See also 2strong
1strong ಸ್ಟ್ರಾಂಗ್‍
ಗುಣವಾಚಕ
( ತರರೂಪ stronger ಉಚ್ಚಾರಣೆ– ಸ್ಟ್ರಾಂಗರ್‍; ತಮರೂಪ
  1. (ಸುಲಭವಾಗಿ ಒಡೆಯದೆ, ಮುರಿಯದೆ, ಹರಿಯದೆ ಯಾ ಸವೆಯದೆ) ಗಟ್ಟಿಯಾದ; ಗಡುಸಾದ; ಬಲವಾದ; ಭದ್ರವಾದ; ದೃಢವಾದ: strong china ಗಟ್ಟಿಯಾದ ಪಿಂಗಾಣಿ. strong stick ಬಲವಾದ ಕೋಲು. strong cloth ಗಟ್ಟಿಯಾದ ಬಟ್ಟೆ. strong foundation ಭದ್ರವಾದ ತಳಹದಿ, ಅಸ್ತಿಭಾರ.
  2. (ಸುಲಭವಾಗಿ ಆಕ್ರಮಿಸಲಾಗದಂತೆ, ವಶಪಡಿಸಿಕೊಳ್ಳಲಾಗದಂತೆ) – ಬಲವಾದ, (ಸು)ಭದ್ರವಾದ: strong fortress (ಸು)ಭದ್ರವಾದ ಕೋಟೆ, ದುರ್ಗ.
  3. (ಸುಲಭವಾಗಿ ವಿಚಲಿತವಾಗದೆ) ದೃಢವಾದ; ಸ್ಥಿರವಾದ; ಅಚಲವಾದ; ಬಲವಾದ: strong suspicion ಬಲವಾದ ಸಂಶಯ. strong conviction ದೃಢ ವಿಶ್ವಾಸ. strong faith ಅಚಲ ಶ್ರದ್ಧೆ. strong views ದೃಢ ಅಭಿಪ್ರಾಯಗಳು.
  4. (ದೇಹದ ವಿಷಯದಲ್ಲಿ) ಗಟ್ಟಿಯಾದ; ಆರೋಗ್ಯವಂತ; ಒಳ್ಳೆಯ ಆರೋಗ್ಯವುಳ್ಳ; ರೋಗಕ್ಕೆ ಪಕ್ಕಾಗದ, ಮತ್ತು (ರೋಗ ಬಂದಲ್ಲಿ) ರೋಗವನ್ನು ಸುಲಭವಾಗಿ ತಡೆದುಕೊಳ್ಳುವ.
  5. (ಮನಃಸ್ಥಿತಿ, ಭಾವಗಳ ವಿಷಯದಲ್ಲಿ) ಅವಿಚಲಿತ; ಗಟ್ಟಿಯಾದ; ಸ್ಥಿರವಾದ; ದೃಢವಾದ; ಭಯ, ಸಿಡುಕು, ಮೊದಲಾದ ದೌರ್ಬಲ್ಯಗಳಿಗೆ ಒಳಗಾಗದ.
  6. (ರೋಗಿಯ ವಿಷಯದಲ್ಲಿ) ಮತ್ತೆ ಆರೋಗ್ಯ ಪಡೆದಿರುವ; ರೋಗ ಗುಣವಾಗಿರುವ; ಸ್ವಾಸ್ಥ ಗಳಿಸಿರುವ; ಸ್ವಸ್ಥ ಸ್ಥಿತಿಗೆ ಬಂದಿರುವ.
  7. (ಮಾರುಕಟ್ಟೆಯ, ಪೇಟೆಯ, ವಿಷಯದಲ್ಲಿ)
    1. (ಧಾರಣೆವಾಸಿ) ಸ್ಥಿರವಾಗಿರುವ.
    2. ಬೆಲೆಗಳು (ತಗ್ಗದೆ) ಏರುಮುಖವಾಗಿರುವ.
    1. ಬಲಿಷ್ಠ; ಶಕ್ತ; ಗಟ್ಟಿಮುಟ್ಟಾದ; ಶಕ್ತಿವಂತ; ಕಸುವುಳ್ಳ: he is strong enough to lift a horse ಅವನು ಒಂದು ಕುದುರೆಯನ್ನು ಬೇಕಾದರೂ ಎತ್ತಿಬಿಡುವಷ್ಟು ಬಲಿಷ್ಠನಾಗಿದ್ದಾನೆ.
    2. (ಗುಣ, ಸಹಜಶಕ್ತಿ, ಮೊದಲಾದ) ದಕ್ಷತೆಯುಳ್ಳ; ಸಾಮರ್ಥ್ಯವುಳ್ಳ: he is strong in judgement ಅವನು ವಿವೇಚನಾ ಸಾಮರ್ಥ್ಯವುಳ್ಳವನಾಗಿದ್ದಾನೆ. he is strong in Greek ಅವನು ಗ್ರೀಕ್‍ ಭಾಷೆ, ಸಾಹಿತ್ಯಗಳಲ್ಲಿ ಸಮರ್ಥ.
  8. ಗಾತ್ರ, ಸಂಖ್ಯೆ ಯಾ ಆನುಕೂಲ್ಯಗಳ ದೃಷ್ಟಿಯಿಂದ – ಬಲವಾಗಿರುವ, ಬಲಿಷ್ಠ: strong army ಸಂಖ್ಯಾಬಲವುಳ್ಳ ಸೇನೆ. strong resources ಯಥೇಚ್ಛ ಸಾಧನ ಸಂಪತ್ತು. a strong contingent ಸುಸಜ್ಜಿತವಾದ ಸೇನಾದಳ.
  9. (ವಾದ ಮೊದಲಾದವುಗಳ ವಿಷಯದಲ್ಲಿ)
    1. ಮನಗಾಣಿಸುವ; ಮನವೊಪ್ಪಿಸುವ; ಮನ ಮುಟ್ಟುವ.
    2. ಪರಿಣಾಮಕಾರಿಯಾದ.
  10. ಚುರುಕಾದ; ತೀಕ್ಷ ವಾದ; ಸೂಕ್ಷ ಶಕ್ತಿಯ: strong eyes ಚುರುಕಾದ ಕಣ್ಣುಗಳು. strong memory ತೀಕ್ಷ ವಾದ ಸ್ಮರಣ, ಸ್ಮ ತಿ, ಜ್ಞಾಪಕ – ಶಕ್ತಿ.
  11. ಬಲಿಷ್ಠ; ಗೆಲ್ಲುವ ಸಾಮರ್ಥ್ಯವುಳ್ಳ: a strong case ಬಲವಾದ, ಗೆಲ್ಲಬಲ್ಲ – ಮೊಕದ್ದಮೆ.
  12. ಕಡು; ಕಟು; ಗಾಢ; ದಟ್ಟ: strong perfume ಕಟುವಾದ ಪರಿಮಳ ದ್ರವ್ಯ. strong colour ಕಡು ಬಣ್ಣ; ಗಾಢವರ್ಣ.
  13. (ತಂಡದ ವಿಷಯದಲ್ಲಿ) (ಹೆಸರಿಸಿದಷ್ಟು) ಸಂಖ್ಯೆಯ ಸಂಖ್ಯಾಬಲವುಳ್ಳ: two hundred strong ಇನ್ನೂರು ಭಟರ ಸಂಖ್ಯಾಬಲವುಳ್ಳ.
  14. ಪ್ರಬಲ; ಬಲಿಷ್ಠ; ಒಗ್ಗಟ್ಟಾದಾಗ ದೊಡ್ಡ ಸಾಧನೆ ಮಾಡಬಲ್ಲ: a strong combination ಸುಸಂಘಟಿತವಾದ ಕೂಟ; ಪ್ರಬಲವಾದ ಸಂಘ.
  15. ಪ್ರಬಲ; ದುರ್ಜೇಯನಾದ; ಗೆಲ್ಲಬಲ್ಲ; ಜಯಶಾಲಿಯಾಗಬಲ್ಲ: a strong candidate ಗೆಲ್ಲಬಲ್ಲ ಅಭ್ಯರ್ಥಿ; ಪ್ರಬಲ ಅಭ್ಯರ್ಥಿ.
  16. (ದ್ರಾವಣ ಯಾ ಪಾನೀಯದ ವಿಷಯದಲ್ಲಿ) ತೀಕ್ಷ ವಾದ; ಗಟ್ಟಿಯಾದ; ಸಾಂದ್ರವಾದ; ನೀರಿನಲ್ಲಿ ಯಾ ಇತರ ದ್ರಾವಣದಲ್ಲಿ ಸೇರಿಸಿದ ದ್ರವ್ಯದ, ಪದಾರ್ಥದ ಪ್ರಮಾಣ ನೀರಿನದಕ್ಕಿಂತ ಹೆಚ್ಚಾಗಿ, ಅಧಿಕವಾಗಿ ಇರುವ: strong tea ಗಟ್ಟಿ ಟೀ; ನೀರಿನ ಯಾ ಹಾಲಿನ ಅಂಶಕ್ಕಿಂತಲೂ ಚಹಾದ ಪ್ರಮಾಣ, ಅಂಶ ಹೆಚ್ಚಾಗಿರುವ ಟೀ.
  17. (ರಸಾಯನವಿಜ್ಞಾನ) (ಆಮ್ಲ ಯಾ ಪ್ರತ್ಯಾಮ್ಲದ ವಿಷಯದಲ್ಲಿ) ಪ್ರಬಲ: a strong solution ಸಂಪೂರ್ಣವಾಗಿ ನಿಯೋಜಿಸಿ ಆನ್‍ ಅಯಾನು ಮತ್ತು ಕ್ಯಾಟ್‍ ಅಯಾನುಗಳನ್ನು ನೀಡುವ.
  18. (ಕಥೆ, ನಾಟಕ, ಮೊದಲಾದವುಗಳ ಸನ್ನಿವೇಶದ ವಿಷಯದಲ್ಲಿ) ಭಾವಪೂರ್ಣ; ಮನ ತಟ್ಟುವ.
  19. (ಧ್ವನಿಯ ವಿಷಯದಲ್ಲಿ) ಗಟ್ಟಿಯಾದ; ಜೋರಾದ.
  20. (ಆಹಾರದ, ಅದರ ರುಚಿಯ, ಯಾ ಪರಿಮಳದ ವಿಷಯದಲ್ಲಿ) ಕಾರವಾದ; ಘಾಟಿನ.
  21. (ಉಸಿರಿನ ವಿಷಯದಲ್ಲಿ) ದುರ್ವಾಸನೆಯ; ದುರ್ಗಂಧದ; ಕೆಟ್ಟನಾತದ.
  22. ಪ್ರಬಲವಾದ; ಪ್ರಭಾವಪೂರ್ಣವಾದ; ಪರಿಣಾಮಕಾರಿಯಾದ; ತೀವ್ರವಾದ; ಉತ್ಕಟವಾದ: a strong tide ಪ್ರಬಲವಾದ (ಸಮುದ್ರದ) ಉಬ್ಬರ, ಭರತ. a strong attraction ಪ್ರಬಲ ಆಕರ್ಷಣೆ. strong influence ಪ್ರಬಲವಾದ ಪ್ರಭಾವ. strong inclination ತೀವ್ರವಾದ ಒಲವು, ಓಲುವೆ.strong feelings ಉತ್ಕಟವಾದ ಭಾವಗಳು. strong protest ತೀವ್ರ ಪ್ರತಿಭಟನೆ. strong support ಪ್ರಬಲ ಬೆಂಬಲ.
  23. (ಸಾಹಿತ್ಯಶೈಲಿಯ ವಿಷಯದಲ್ಲಿ) ವೀರ್ಯವತ್ತಾದ; ಓಜಸ್ಸಿನ; ಸತ್ತ್ವಪೂರ್ಣವಾದ; ಸ್ಪಷ್ಟವೂ ಬಿಗಿಯೂ ಆದ.
  24. (ಗಾಳಿಯ ವಿಷಯದಲ್ಲಿ) ಬಲವಾದ; ಜೋರಾದ; ಬಿರುಸಾದ.
  25. (ತೆಗೆದುಕೊಂಡ ಕಾರ್ಯಕ್ರಮದ ವಿಷಯದಲ್ಲಿ) ತೀವ್ರವಾದ; ಕಠಿನವಾದ; ಉಗ್ರವಾದ: strong measures ತೀವ್ರ ಕಾರ್ಯಕ್ರಮ; ಕಠಿನ ನಡೆವಳಿ. is strong against compromise ರಾಜಿಯ ವಿರುದ್ಧ ಬಲವಾಗಿದ್ದಾನೆ, ಕೂಡದೆಂದು ಹಟ ಹಿಡಿದಿದ್ದಾನೆ.
  26. ತೀಕ್ಷ ವಾದ; ಬಲವಾದ; ಇಂದ್ರಿಯಗಳ ಯಾ ಭಾವಗಳ ಮೇಲೆ ಪರಿಣಾಮ ಬೀರುವ: a strong light ತೀಕ್ಷ – ಬೆಳಕು, ಪ್ರಕಾಶ; ಕಣ್ಣುಕೋರೈಸುವ ಬೆಳಕು. strong acting ಪರಿಣಾಮಕಾರಿಯಾದ ಅಭಿನಯ.
  27. (ವ್ಯಾಕರಣ) ಸಬಲ: ಜರ್ಮ್ಯಾನಿಕ್‍ ಭಾಷೆಗಳಲ್ಲಿ
    1. ಭೂತರೂಪ ಮತ್ತು ಭೂತಕೃದಂತ ರೂಪಗಳು -ed, -d, -t ಎಂಬ ಪ್ರತ್ಯಯಗಳು ಸೇರದೆ, ಧಾತುರೂಪದಲ್ಲಿಯ ಸ್ವರ ಪರಿವರ್ತನದಿಂದ ಆಗುವ, ಉದಾಹರಣೆಗೆ, swim, swam, swum; drink, drank, drunk; ring, rang, rung, ಇತ್ಯಾದಿ.
    2. (ನಾಮವಾಚಕ, ಗುಣವಾಚಕಗಳ ರೂಪಾಂತರಗಳಲ್ಲಿ) ಮೂಲತಃ -n ಅಂತ್ಯವಾಗಿರದಿದ್ದ ಪದಗಳ ವಿಭಕ್ತಿ ಗಣಕ್ಕೆ ಸೇರಿದ.
ಪದಗುಚ್ಛ

as strong as a horse (or an ox) ಒಂದು ಕುದುರೆಯ (ಯಾ ಎತ್ತಿನ) ಬಲವುಳ್ಳ; ಕುದುರೆ ಯಾ ಎತ್ತು ಮಾಡುವಷ್ಟು ಕೆಲಸವನ್ನು ಮಾಡಬಲ್ಲ.