See also 2spur
1spur ಸ್ಪರ್‍
ನಾಮವಾಚಕ
  1. ಚುಚ್ಚುಮುಳ್ಳು; ಚುಚ್ಚುಗಾಲಿ; ಹಿಮ್ಮಡಿ ಮುಳ್ಳು; (ಕುದುರೆ ದೌಡಾಯಿಸಲು ಚುಚ್ಚುವುದಕ್ಕಾಗಿ) ಸವಾರನ ಹಿಮ್ಮಡಿಗೆ ತೊಡಿಸಿದ ಚುಚ್ಚುಮುಳ್ಳು, ಮುಳ್ಳಿನಂಥ ವಸ್ತು.
  2. (ತೀರ್ಮಾನ ಮೊದಲಾದವನ್ನು) ಪ್ರಚೋದಿಸು; ಪ್ರೇರಿಸು.
  3. (ರೂಪಕವಾಗಿ) ಪ್ರಚೋದನೆ; ಪ್ರೇರಣೆ; ಉತ್ತೇಜನ: the spur of poverty ಬಡತನದ ಪ್ರಚೋದನೆ.
  4. ಚುಚ್ಚು ಮುಳ್ಳಿನಾಕಾರದ, ಮೊನೆಯಾದ ವಸ್ತು:
    1. ಬೆಟ್ಟದ ಚಾಚು; ಪರ್ವತದಿಂದ ಯಾ ಪರ್ವತಶ್ರೇಣಿಯಿಂದ ಚಾಚಿಕೊಂಡಿರುವಂಥ ಭಾಗ.
    2. ಉಪರಸ್ತೆ ಯಾ ಉಪರೈಲುಹಾದಿ.
    3. ಹುಂಜದ ಕಾಲಿನ ಮೇಲಿನ ಗಡಸು ಚಾಚಿಕೆ.
    4. ಕಾಳಗದ ಹುಂಜದ ಕಾಲುಚಾಚಿಗೆ ತೊಡಿಸಿದ ಉಕ್ಕಿನ ಮುಳ್ಳು, ಮೊನೆ.
    5. = climbing-iron.
    6. (ಪಿಂಗಾಣಿ ಸಾಮಾನುಗಳನ್ನಿಡಲು ಸುಡುಗೂಡಿನಲ್ಲಿರುವ) ಸಣ್ಣ ಊರೆ, ಚಾಚು.
  5. (ಸಸ್ಯವಿಜ್ಞಾನ)
    1. ಹೂವಿನ ಅಂಗದಿಂದ ಹೊರಡುವ, ತೆಳ್ಳಗೆ ಟೊಳ್ಳಾಗಿರುವ ಹೊರ ಚಾಚಿಕೆ.
    2. (ಹಣ್ಣು ಯಾ ಕಾಯಿ ಬಿಡುವ) ಕುಡಿ.
ಪದಗುಚ್ಛ
  1. on the spur of the moment ಇದ್ದಕ್ಕಿದ್ದಂತೆ; ಥಟ್ಟೆಂದು; ಪೂರ್ವಾಲೋಚನೆ ಇಲ್ಲದೆ; ಸಮಯಸ್ಫೂರ್ತಿಯಿಂದ.
  2. put (or set) spurs to
    1. (ಕುದುರೆಯನ್ನು ಓಡಿಸಲು) ಪಕ್ಕೆ ಚುಚ್ಚು.
    2. (ಮಸೂದೆ ಮೊದಲಾದವನ್ನು) ಪ್ರಚೋದಿಸು.
  3. win one’s spurs
    1. (ಚರಿತ್ರೆ) ನೈಟ್‍ ಪದವಿ ಗಳಿಸು.
    2. (ರೂಪಕವಾಗಿ) ಖ್ಯಾತಿ ಪಡೆ; ಕೀರ್ತಿ ಗಳಿಸು; ಹೆಸರುವಾಸಿಯಾಗು.