(ಹೊರ, ಬಾಹ್ಯ) ರೂಪ; ಆಕಾರ; ಆಕೃತಿ: spherical in shape ಗೋಳಾಕಾರದ. it has the shape of a boat ಅದಕ್ಕೆ ದೋಣಿಯ ಆಕಾರವಿದೆ.
(ವ್ಯಕ್ತಿಯ ಯಾ ವಸ್ತುವಿನ) ಹೊರನೋಟ; ತೋರ್ಕೆ; ರೂಪ; ಆಕೃತಿ; ಆಕಾರ; ವೇಷ: monster in human shape ಮಾನವಾಕೃತಿಯ, ಮಾನವ – ರೂಪದ, ವೇಷದ ಪೆಡಂಭೂತ.
ನಿರ್ದಿಷ್ಟ – ರೂಪ, ಆಕಾರ: his intention took shape in action ಅವನ ಸಂಕಲ್ಪವು ಕಾರ್ಯರೂಪ ತಾಳಿತು. he showed me politeness in the shape of an invitation ಆಹ್ವಾನ ಕೊಡುವ ರೂಪದಲ್ಲಿ ಅವನು ತನ್ನ ವಿನಯವನ್ನು ತೋರಿಸಿದ.
ರೀತಿ; ಬಗೆ; ಪ್ರಕಾರ: he made no approach in any shape (or form ) ಅವನು ಯಾವುದೇ ರೀತಿಯಲ್ಲೂ, ಪ್ರಕಾರದಲ್ಲೂ ಯಾವ ಸಂಧಾನವನ್ನೂ ಮಾಡಲಿಲ್ಲ.
ಸ್ಪಷ್ಟ ಯಾ ಸರಿಯಾದ – ರೂಪ, ಆಕಾರ; ಕ್ರಮ; ವ್ಯವಸ್ಥೆ: get one’s ideas into shape ತನ್ನ ಭಾವನೆಗಳಿಗೆ ಸ್ಪಷ್ಟ ರೂಪ ಕೊಡು; ತನ್ನ ಭಾವನೆಗಳನ್ನು ಸರಿಯಾಗಿ ವ್ಯವಸ್ಥೆಗೊಳಿಸು. give shape to (ಯಾವುದಕ್ಕೇ ಆಗಲಿ) ರೂಪ ಕೊಡು; ಸರಿಯಾದ ವ್ಯವಸ್ಥೆ ಕಲ್ಪಿಸು.
(ವಿಶೇಷಣವಿರುವಾಗ ಆ ವಿಶೇಷಣಕ್ಕೆ ತಕ್ಕ) ಸ್ಥಿತಿ: in bad shape ದುಃಸ್ಥಿತಿಯಲ್ಲಿ; ಹದಗೆಟ್ಟ ಸ್ಥಿತಿಯಲ್ಲಿ. in good shape ಒಳ್ಳೆಯ ಸ್ಥಿತಿಯಲ್ಲಿ. in poor shape ಅಷ್ಟೇನೂ ಉತ್ತಮವಲ್ಲದ ಸ್ಥಿತಿಯಲ್ಲಿ.
(ವಿಶೇಷಣರಹಿತವಾಗಿ) ಸುಸ್ಥಿತಿ; ಉತ್ತಮ ಸ್ಥಿತಿ: back in shape ಮತ್ತೆ ಸುಸ್ಥಿತಿಯಲ್ಲಿ.
ಅಸ್ಪಷ್ಟಾಕೃತಿ; ಛಾಯೆ; (ಯಾವುದೋ) ಅಸ್ಪಷ್ಟ – ರೂಪ, ಆಕಾರ, ಮೂರ್ತಿ; ಪ್ರತ್ಯಕ್ಷವಾಗಿ ಕಂಡ ಯಾ ಕಲ್ಪಿಸಿಕೊಂಡ ವ್ಯಕ್ತಿ, ವಸ್ತು, ಭೂತ, ಪ್ರೇತ, ಮೊದಲಾದವುಗಳ ಆಕಾರ: a shape loomed through the mist ಆ ಮಂಜಿನ ರಾಶಿಯಲ್ಲಿ ಯಾವುದೋ ಒಂದು ಆಕೃತಿ ಬೆಳೆಯುತ್ತಾ ಬಂತು. a grim mysterious shape stalked towards me ಒಂದು ಉಗ್ರ, ವಿಚಿತ್ರ ಆಕಾರವು ನನ್ನ ಕಡೆಗೆ ಧಾವಿಸಿ ಬಂತು.
(ಕಸಬಉದಾರನ) ಮಾದರಿ; ಅಚ್ಚು (ಉದಾ. ಹ್ಯಾಟು, ಬೆಲ್ಲ, ಮೊದಲಾದವುಗಳ ಮಾದರಿ ಯಾ ಅಚ್ಚು).
(ಅಚ್ಚಿನಲ್ಲಿ ತಯಾರಿಸಿದ, ದೂಧ್ಪೇಡಾದಂತಹ) ಗಟ್ಟಿ ಹಲ್ವ, ಜೆಲ್ಲಿ, ಮೊದಲಾದವು.
ಒಂದು ವಿಶಿಷ್ಟ ರೂಪದಲ್ಲಿ ತಯಾರಿಸಿದ, ಕತ್ತರಿಸಿದ ಯಾವುದೇ ಸಾಮಗ್ರಿ, ಕಾಗದ, ಮೊದಲಾದವು.
ಪದಗುಚ್ಛ
in the shape of (-ರ) ರೀತಿಯಲ್ಲಿ; ರೂಪದಲ್ಲಿ.
lick (orknockorwhip someone/thing) into shape (ಯಾರನ್ನೇ ಯಾ ಯಾವುದನ್ನೇ)
ಸರಿಯಾದ ರೂಪಕ್ಕೆ ತರು; ಉತ್ತಮ ಸ್ಥಿತಿಗೆ ತರು.
ದರ್ಶನೀಯವಾಗಿಸು; ಅಂದವಾಗಿ ಕಾಣುವಂತೆ ಮಾಡು.
ದಕ್ಷವಾಗಿರುವಂತೆ, ಸಮರ್ಥವಾಗಿರುವಂತೆ – ಮಾಡು.
out of shape
ತನ್ನ ಸಹಜವಾದ ಯಾ ಮೂಲರೂಪ ಕೆಟ್ಟಿರು; ಆಕಾರ ಕಳೆದುಕೊಂಡಿರು; ಆಕಾರದಲ್ಲಿಲ್ಲದಿರು.