See also 2ruffle
1ruffle ರಹ(ಹ್‍)ಲ್‍
ಸಕರ್ಮಕ ಕ್ರಿಯಾಪದ
  1. (ಗರಿ ಕೂದಲುಗಳನ್ನು) ಚೆದರು; ಚೆದರಿಸು; ಕೆದರು.
  2. (ನೀರು, ಮನಸ್ಸು, ವ್ಯಕ್ತಿಯ ಚಿತ್ತ ಮೊದಲಾದವನ್ನು) ಕದಡು; ಕಲಕು; ಕ್ಷೋಭೆಗಳಿಸು: nothing ever ruffled him ಅವನನ್ನು ಯಾವುದೂ ಎಂದಿಗೂ ಕದಡಲಿಲ್ಲ.
  3. (ಹುಬ್ಬು) ಗಂಟಿಕ್ಕಿಸು.
  4. (ಬಟ್ಟೆ, ಜರತಾರಿ ಮೊದಲಾದವನ್ನು) ನಿರಿಹಿಡಿ; ಒಂದು ಅಂಚಿನ ಕಡೆ ಎಳೆದು ನಿರಿಗೆಮಾಡು.
  5. (ಹಕ್ಕಿಯ ವಿಷಯದಲ್ಲಿ) (ಕೋಪ, ಚಳಿಗಳಿಂದ ಯಾ ಪ್ರದರ್ಶನಕ್ಕಾಗಿ) ಗರಿಗಳನ್ನು ನಿಮಿರಿಸು, ಕೆದರು, ಚೆದುರಿಸು.
  6. (ಪುಸ್ತಕದ ಪುಟಗಳನ್ನು) ಚುರುಕಾಗಿ ತಿರುವಿಹಾಕು.
  7. ಇಸ್ಪೀಟಿನ ಎಲೆಗಳನ್ನು ಕಲಸುವಾಗ ಬೆರಳುಗಳ ಮಧ್ಯೆ ಎಲೆಗಳನ್ನು ಚುರುಕಾಗಿ ತೂರಿಸು.
ಅಕರ್ಮಕ ಕ್ರಿಯಾಪದ
  1. (ಸಮುದ್ರ, ಕೂದಲು, ಚಿತ್ತ ಮೊದಲಾದವುಗಳ ವಿಷಯದಲ್ಲಿ) ಕದಡಿಹೋಗು; ಕಲಕು; ಕ್ಷೋಭೆಗೊಳ್ಳು; ಕೆದರು; ಶಾಂತಿಯನ್ನು ಕಳೆದುಕೊ.
  2. ಸೊಕ್ಕಿ ನಡೆ; ಜರ್ಬು ತೋರು; ಅತಿ ಪ್ರತಿಷ್ಠೆಮಾಡು; ಅಹಂಕಾರದಿಂದ ವರ್ತಿಸು.
  3. ಜಗಳಗಂಟಿಯಾಗಿ ವರ್ತಿಸು; ಜಗಳವಾಡು.