See also 1rub  3rub
2rub ರಬ್‍
ನಾಮವಾಚಕ
  1. ಒಂದು ಪಟ್ಟು – ಉಜ್ಜುವುದು, ತಿಕ್ಕುವುದು, ತೀಡುವುದು, ತೇಯುವುದು: give it a rub ಅದನ್ನು ಒಂದು ಪಟ್ಟು ಉಜ್ಜು, ತಿಕ್ಕು.
  2. ಉಜ್ಜಿ, ತಿಕ್ಕಿ – ಬೆಳಗಿಸು, ಮೆರಗು ಕೊಡುವುದು.
  3. ಉಜ್ಜಿಹಾಕುವುದು, ಹೆರೆದು ಹಾಕುವುದು; ತೇದು ಹಾಕುವುದು.
  4. ಉಜ್ಜಿ ಪ್ರತಿಯೆತ್ತುವುದು; ಉಜ್ಜುಪ್ರತಿ ಮಾಡುವುದು.
  5. (ಕೈ, ವಸ್ತುಗಳು ಮೊದಲಾದವನ್ನು) ತೀಡುವುದು; ಹೊಸೆತ; ಮಸೆತ.
  6. (ಕರೆ ಮೊದಲಾದವನ್ನು) ಉಜ್ಜಿಹಾಕುವುದು; ಅಳಿಸುವುದು.
  7. (ತೈಲ ಮೊದಲಾದವನ್ನು) ಉಜ್ಜುವುದು; ಒಳಕ್ಕೆ ಒತ್ತುವುದು.
  8. (ಮುಲಾಮನ್ನು) ಹಚ್ಚುವುದು; (ಮುಲಾಮಿನ) ಬಳಿತ, ಲೇಪನ.
  9. (ಕುದುರೆಯನ್ನು) ಮಾಲೀಸು ಮಾಡುವುದು.
  10. (ಬಣ್ಣ ಮೊದಲಾದವನ್ನು) ತೇಯುವುದು; ಅರೆತ.
    1. (ಬೋಲ್ಸ್‍ ಚೆಂಡಾಟದಲ್ಲಿ, ಚೆಂಡನ್ನು ತಡೆಯುವ ಯಾ ಈ ಕಡೆ ಆ ಕಡೆ ಹೋಗುವಂತೆ ಮಾಡುವ) ನೆಲದ ಏರುಪೇರು.
    2. ನೆಲದ ಏರುಪೇರಿನಿಂದ ಚೆಂಡು ವಕ್ರವಾಗಿ, ಅತ್ತಇತ್ತ ಹೋಗುವುದು: those who play at bowls must look for rubs(ಗಾದೆ) ಬೋಲ್ಸ್‍ ಚೆಂಡಾಟ ಆಡುವವರು ನೆಲದ ಏರುಪೇರುಗಳನ್ನು ನಿರೀಕ್ಷಿಸಬೇಕು.
  11. (ರೂಪಕವಾಗಿ) ಅಡ್ಡಿ; ಅಡಚಣೆ; ತೊಡಕು; ಕಷ್ಟ; ಸಂಶಯ: there’s the rub ಅಲ್ಲೇ ಕಷ್ಟ ಬರುವುದು; ತೊಡಕಿರುವುದು, ಸಂಶಯ ಹುಟ್ಟುವುದು ಅಲ್ಲೇ.
ಪದಗುಚ್ಛ
  1. rub of (or on) the green (ಗಾಲ್‍ ಆಟ) ಚೆಂಡಿನ ಸ್ಥಾನಕ್ಕೆ ಯಾ ಗತಿಗೆ ಆಕಸ್ಮಿಕವಾಗಿ ಒದಗಿದ ಅಡಚಣೆ.
  2. the rubs and worries of life ಜೀವನದ – ಕಷ್ಟಗಳು ಮತ್ತು ಚಿಂತೆಗಳು, ಪಡುಪಾಟಲು, ಕಷ್ಟಕಾರ್ಪಣ್ಯಗಳು.