See also 2rub  3rub
1rub ರಬ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rubbed; ವರ್ತಮಾನ ಕೃದಂತ rubbing).
ಸಕರ್ಮಕ ಕ್ರಿಯಾಪದ
  1. (ಕೈಯನ್ನು ಯಾ ಇನ್ನೊಂದು ವಸ್ತುವನ್ನು) ಉಜ್ಜು; ತಿಕ್ಕು; ತೀಡು; ತೇಯಿ.
  2. ಉಜ್ಜಿ ಚೊಕ್ಕಟಮಾಡು; ತಿಕ್ಕಿ ಬೆಳಗು.
  3. ಉಜ್ಜಿಹಾಕು; ಹೆರೆದುಹಾಕು; ತೇದುಹಾಕು.
  4. ಉಜ್ಜಿ ಅತಿಮಾಡು; ಲೋಹದ ಯಾ ಕಲ್ಲಿನ ಫಲಕದಲ್ಲಿ ಕೆತ್ತಿದ ಅಕ್ಷರ, ಚಿತ್ರ ಮೊದಲಾದವುಗಳ ಮೇಲೆ ಕಾಗದ ಇಟ್ಟು ಬಣ್ಣದ ಸೀಮೆಯ ಸುಣ್ಣ ಮೊದಲಾದವನ್ನು ಉಜ್ಜಿ ಪ್ರತಿಯೆತ್ತು.
  5. (ಕೈಯನ್ನು, ವಸ್ತುವನ್ನು ಒಂದರ ಮೇಲೆ) ತೀಡು.
  6. (ವಸ್ತುಗಳನ್ನು ಪರಸ್ಪರ) ಹೊಸೆ; ಮಸೆ; ಉಜ್ಜು.
  7. (ಕರೆ ಮೊದಲಾದವನ್ನು) ಉಜ್ಜಿಹಾಕು; ತಿಕ್ಕಿ ಅಳಿಸು.
  8. (ವಸ್ತ್ರದ ಗುಂಜು ಮೊದಲಾದವನ್ನು, ರೂಪಕವಾಗಿ ನಾಚಿಕೆ, ಹೊಸತನ ಮೊದಲಾದವನ್ನು) ತೊಡೆದುಹಾಕು.
  9. (ತೈಲ ಮೊದಲಾದವನ್ನು) ಒಳಕ್ಕೆ – ಒತ್ತು, ಉಜ್ಜು, ಲೇಪಿಸು.
  10. ಉಜ್ಜಿ ಪುಡಿಮಾಡು.
  11. (ಒಂದರಿಯಲ್ಲಿ) ತಿಕ್ಕಿ ಉದುರಿಸು.
  12. (ಹೆಚ್ಚಿನ ಗಾತ್ರವನ್ನು, ಹೆಚ್ಚಿನ ಮಟ್ಟವನ್ನು) ತೇದುಹಾಕು; ಉಜ್ಜಿ ಕಡಮೆಮಾಡು.
  13. (ಮುಲಾಮನ್ನು) ಹಚ್ಚು; ಬಳಿ; ಲೇಪಿಸು.
  14. (ಕುದುರೆಯನ್ನು) ಮಾಲೀಸುಮಾಡು.
  15. (ತನ್ನನ್ನು) ಅಂದಮಾಡಿಕೊ; ನೀಟು ಮಾಡಿಕೊ.
  16. (ಮಾಸಿದ ವಸ್ತುವಿಗೆ) ಉಜ್ಜಿ ಕಾಂತಿ ಕೊಡು; ತಿಕ್ಕಿ ಹೊಳಪು ಕೊಡು.
  17. (ರೂಪಕವಾಗಿ) (ಜ್ಞಾಪಕ ಶಕ್ತಿ, ಓದಿದ್ದ ವಿದ್ಯೆ ಮೊದಲಾದವನ್ನು) ಚುರುಕುಗೊಳಿಸಿಕೊ; ಎಚ್ಚರಮಾಡಿಕೊ; ಕುದುರಿಸಿಕೊ; ನೆನಪಿಗೆ ತಂದುಕೊ.
  18. (ಚಾಕಲೇಟು, ಬಣ್ಣ ಮೊದಲಾದವನ್ನು) ತೇಯಿ; ಅರೆ (ರೂಪಕವಾಗಿ ಸಹ).
  19. ಉಜ್ಜಿ ಉಜ್ಜಿ – ಹುಣ್ಣು ಮಾಡು, ಗಾಯ ಮಾಡು, ಚರ್ಮ ಎಡೆ.
  20. (ಮತ್ತೊಂದಕ್ಕೆ) ಉಜ್ಜುತ್ತಿರು; ತಿಕ್ಕುತ್ತಿರು.
ಅಕರ್ಮಕ ಕ್ರಿಯಾಪದ
  1. (ಬೋಲ್ಸ್‍ ಚೆಂಡಿನ ವಿಷಯದಲ್ಲಿ) ನೆಲದ ಏರುಪೇರಿನಿಂದ – ಚಲನೆ ತಡೆಯಾಗು, ವಕ್ರವಾಗಿ ಹೋಗು.
  2. (ರೂಪಕವಾಗಿ)
    1. (ವ್ಯಕ್ತಿ, ಕಾರ್ಯವಿಧಾನ ಮೊದಲಾದವುಗಳ ವಿಷಯದಲ್ಲಿ) ಕಷ್ಟಪಟ್ಟುಕೊಂಡು ಮುಂದೆ ಸಾಗು; ಶ್ರಮದಿಂದ ಮುಂದುವರಿ.
    2. ಜೀವನ ಸಾಗಿಸು: many men could rub along happily without works of art ಅನೇಕರು ಕಲಾತಿಗಳಿಲ್ಲದೆ ಸಂತೋಷವಾಗಿ ಜೀವನ ಸಾಗಿಸಿಕೊಂಡು ಹೋಗಬಲ್ಲರು.
  3. (ಬಟ್ಟೆ, ಚರ್ಮ ಮೊದಲಾದವು) ಉಜ್ಜಿಹೋಗು; ಸವೆದುಹೋಗು; ತಾಗಿ, ಬಡಿದು – ತರೆದು ಹೋಗು, ತೇದುಹೋಗು.
  4. (ಒಂದಕ್ಕೆ) ಉಜ್ಜಿ ಚಲಿಸು.
ಪದಗುಚ್ಛ
  1. rub along (or on) (ಆಡುಮಾತು) ಹೇಳಿಕೊಳ್ಳುವಂಥ ಕಷ್ಟವಿಲ್ಲದೆ ಹೇಗೋ ನಿಭಾಯಿಸು, ನಿರ್ವಹಿಸು.
  2. rub bare ಸವೆಸು.
  3. rub down ಉಜ್ಜಿ ಒಣಗಿಸು, ನಯಮಾಡು ಯಾ ಶುದ್ಧಿಮಾಡು.
  4. rub dry ಉಜ್ಜಿ – ಆರಿಸು, ಒಣಗಿಸು.
  5. rub it in (ರೂಪಕವಾಗಿ) (ಪಾಠ, ಅಪಮಾನ ಸಂಗತಿ, ಅಪ್ರಿಯ ವಿಷಯ ಮೊದಲಾದವನ್ನು) ಒತ್ತಿ ಒತ್ತಿ ಹೇಳು; ಅರೆದು ಹುಯ್ಯಿ; ಮನಸ್ಸಿಗೆ ನಾಟುವಂತೆ ಒಳಕ್ಕೆ ತೀಡು.
  6. rub noses (ಕೆಲವು ಕಾಡುಜನರಲ್ಲಿ) ಪರಸ್ಪರ ಎದುರುಗೊಳ್ಳು; ವಂದಿಸು; (ವಂದಿಸುವ ಸೂಚನೆಯಾಗಿ) ಮೂಗು ಮೂಗು ಉಜ್ಜು.
  7. rub off
    1. ಸಂಪರ್ಕದಿಂದ ವರ್ಗಾಯಿಸಲ್ಪಡು: some of his attitudes have rubbed off on me ಅವನ ಕೆಲವು ಧೋರಣೆಗಳು ಅವನ ಸಹವಾಸದಿಂದ ನನಗೆ ವರ್ಗಾಯಿಸಲ್ಪಟ್ಟಿವೆ, ಬಂದಿವೆ.
    2. ಉಜ್ಜಿ ತೆಗೆದು ಹಾಕು.
  8. rub one’s hands (ಸಾಮಾನ್ಯವಾಗಿ ತುಂಬ ಪ್ತಿಯನ್ನು ಸೂಚಿಸಲು) ಕೈಉಜ್ಜಿಕೊ.
  9. rub out
    1. ರಬ್ಬರ್‍ನಿಂದ ಅಳಿಸು, ಉಜ್ಜಿ ಹಾಕು.
    2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕೊಲ್ಲು; ಸಾಯಿಸು; ಮುಗಿಸಿಬಿಡು.
  10. rub shoulders with (ಇನ್ನೊಬ್ಬ ವ್ಯಕ್ತಿಯ ಒಡನೆ) ಸೇರು; ಬೆರೆ; ಸಂಸರ್ಗಮಾಡು; ಭುಜ ತಿಕ್ಕು; ಜೊತೆಯಲ್ಲಿ ಓಡಾಡು.
  11. rub up
    1. (ಕಳೆಗುಂದಿದ ವಸ್ತುವಿಗೆ) ಮೆರಗುಕೊಡು.
    2. ಓದಿದ್ದನ್ನು ಪುನರಭ್ಯಾಸ ಮಾಡು, ನೆನಪಿಗೆ ತಂದುಕೊ.
  12. rub up the wrong way (ಒಬ್ಬನ ಇಷ್ಟಕ್ಕೆ ವಿರೋಧವಾಗಿ, ಸ್ವಭಾವಕ್ಕೆ ವಿರೋಧವಾಗಿ ವರ್ತಿಸಿ) ಕೆರಳಿಸಿ ಎದುರುಹಾಕಿಕೊ; ಸಿಟ್ಟಿಗೆಬ್ಬಿಸು; ರೇಗುವಂತೆ ಮಾಡು.