See also 2romp
1romp ರಾಂಪ್‍
ಅಕರ್ಮಕ ಕ್ರಿಯಾಪದ
  1. (ಮಕ್ಕಳು ಮೊದಲಾದವರ ವಿಷಯದಲ್ಲಿ) ಒಟ್ಟಿಗೆ ಆಟವಾಡು; ಕುಣಿದಾಡು; ನೆಗೆದಾಡು; ಜಿಗಿದಾಡು; ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋಗು; ಕುಸ್ತಿಯಾಡು; ಹೋರಾಡು.
  2. (ಕುದುರೆ ಜೂಜಿನ ಅಶಿಷ್ಟ) ಸುಲಭವಾಗಿ, ಅನಾಯಾಸವಾಗಿ–ಮುಂದೋಡು; ಅನಾಯಾಸವಾಗಿ, ಪ್ರಯಾಸವಿಲ್ಲದೆ–ಗೆಲ್ಲು, ಗೆದ್ದುಬರು.
ಪದಗುಚ್ಛ
  1. romp along (or past) (ಆಡುಮಾತು) ಅನಾಯಾಸವಾಗಿ ಮುಂದುವರಿ; ಸುಲಭವಾಗಿ ಸಾಗು.
  2. romp in(or home) (ಆಡುಮಾತು) ಸುಲಭವಾಗಿ ಗೆದ್ದುಬರು; ಸುಲಭ ಜಯಗಳಿಸು.