See also 1roll
2roll ರೋಲ್‍
ಸಕರ್ಮಕ ಕ್ರಿಯಾಪದ
  1. ಉರುಳಿಸು; ಹೊರಳಿಸು: roll the barrel ಪೀಪಾಯಿಯನ್ನು ಉರುಳಿಸು.
  2. ತಿರುಗಿಸು; ಹೊರಳಿಸು; ಸುತ್ತಿಸು: rolling a marble between his palms ಅವನ ಅಂಗೈಗಳ ಮಧ್ಯೆ ಗೋಲಿಯನ್ನು ಹೊರಳಿಸುತ್ತಾ.
  3. (ಸುರುಳಿ) ಸುತ್ತು; ಸುತ್ತಿಕೋ; ಹೊದೆದುಕೊ: rolled himself up in the blankets ಕಂಬಳಿಗಳಲ್ಲಿ ತನ್ನನ್ನು ಸುತ್ತಿಕೊಂಡನು.
  4. ಹೊರಳಿಸು: rolled his eyes on us ನಮ್ಮ ಕಡೆ ಅವನ ಕಣ್ಣುಗಳನ್ನು ಹೊರಳಿಸಿದನು.
  5. (ನೀರಿನಲ್ಲಿ, ಕೆಸರಿನಲ್ಲಿ, ಮರಳಿನಲ್ಲಿ) ಉರುಳಾಡು; ಹೊರಳಾಡು; ಓಲಾಡು; ಮುಳುಗಿ ತೇಲು: porpoise rolls in the water ಕಡಲಹಂದಿ ನೀರಿನಲ್ಲಿ ಉರುಳಾಡುತ್ತದೆ.
  6. ಅಲೆ ಅಲೆಯಾಗಿ ಹೋಗುವಂತೆ, ಹರಿಯುವಂತೆ, ಉರುಳುವಂತೆ – ಮಾಡು, ಒಯ್ಯಿ: river rolls its waters to sea ನದಿ ತನ್ನ ನೀರನ್ನು ಸಮುದ್ರಕ್ಕೆ ಹರಿಸಿಕೊಂಡು ಒಯ್ಯುತ್ತದೆ.
  7. (ಶಬ್ದ) ಮೊಳಗಿಸು; ಅನುರಣನ ಮಾಡು; ತುಂಬುದನಿಯಲ್ಲಿ ಉಚ್ಚರಿಸು; ತರಂಗ ತರಂಗವಾಗಿ ಬರುವಂತೆ ಮಾಡು; ಘೋಷದಿಂದ ಹೇಳು: roll out verses ಪದ್ಯಗಳನ್ನು ಘೋಷದಿಂದ ಹೇಳು.
  8. ಒತ್ತು; ಲಟ್ಟಿಸು; ಉರುಳೆಯಿಂದ ಒತ್ತಿ (ಯಾ ಒತ್ತು ಉರುಳೆಗಳ ಮಧ್ಯೆ ಹಾಯಿಸಿ) ಚಪ್ಪಟೆ, ಸಪಾಟು, ಮಟ್ಟಸ – ಮಾಡು: roll paste for pies ಕಡುಬಿಗಾಗಿ ಕಣಕವನ್ನು ಲಟ್ಟಿಸು.
  9. ಸುರುಳಿಸುತ್ತು; ಸುರುಳಿ ಮಾಡು: the way to roll a greatcoat ಮೇಲಂಗಿಯನ್ನು ಸುರುಳಿ ಮಾಡುವ ವಿಧಾನ. rolled a newspaper ವೃತ್ತಪತ್ರಿಕೆಯೊಂದನ್ನು ಸುರುಳಿಸುತ್ತಿದನು.
  10. ಉಂಡೆ ಸುತ್ತು; ಉಂಡೆಮಾಡು; ಸುರುಳಿಮಾಡು: roll snow into ball ಹಿಮವನ್ನು ಚೆಂಡಿನಂತೆ ಉಂಡೆ ಮಾಡು.
  11. (ಮುದುರಿರುವುದನ್ನು, ಸುರುಳಿ ಸುತ್ತಿರುವುದನ್ನು) ಚಪ್ಪಟೆಯಾಗಿ ಹಾಸು; ಸಮನಾಗಿ ಹರಡು: he rolles the map out on the table ಭೂಪಟವನ್ನು ಮೇಜಿನ ಮೇಲೆ ಚಪ್ಪಟೆಯಾಗಿ ಹರಡಿದನು.
  12. ಸುತ್ತು; ಸುತ್ತಿಡು; ಮುಚ್ಚು; ಹೊದ್ದಿಸು: she rolled the child in a blanket ಮಗುವನ್ನು ಕಂಬಳಿಯಲ್ಲಿ ಸುತ್ತಿದಳು.
  13. (ಮದ್ದಲೆಯನ್ನು) ಬಲವಾಗಿ ಮತ್ತು ವೇಗವಾಗಿ ಬಾರಿಸು.
ಅಕರ್ಮಕ ಕ್ರಿಯಾಪದ
  1. ಉರುಳು; ಹೊರಳು: ball rolled under the table ಚೆಂಡು ಮೇಜಿನ ಕೆಳಗೆ ಉರುಳಿಹೋಯಿತು.
  2. (ಕಣ್ಣು) ಹೊರಳು: his eyes roll strangely ಅವನ ಕಣುಗಳು ವಿಚಿತ್ರವಾಗಿ ಹೊರಳುತ್ತವೆ.
  3. ಓಲಾಡು; ತೂಗು; ತೂಗಾಡು; ಹೊಯ್ದಾಡು; ಓಲಾಡುತ್ತಾ ನಡೆ: ship rolls and pitches ಹಡಗು ಏಳುತ್ತಾ ಬೀಳುತ್ತಾ ತೂಗಾಡುತ್ತದೆ.
  4. ಅಲೆಅಲೆಯಾಗಿ, ತರಂಗತರಂಗವಾಗಿ – ಹೋಗು, ಹರಿ, ಉರುಳು; ಅಲೆಅಲೆಯಾದ ಚಲನೆಯನ್ನು ಯಾ ಮೇಲ್ಮೈಯನ್ನು ತೋರು: river rolls ನದಿ ಅಲೆಅಲೆಯಾಗಿ ಹರಿಯುತ್ತದೆ.
  5. (ಶಬ್ದ) ಮೊಳಗು; ಅನುರಣನವಾಗು; ಮೊರೆ: voice rolls ಧ್ವನಿ ಮೊಳಗುತ್ತದೆ.
  6. (ಗಾಲಿಗಳುಳ್ಳ ವಾಹನ) ಮುಂದೆ ಸಾಗು; ಮುಂದುವರಿ; ಮುಂದೆಹೋಗು: carriage rolled along ವಾಹನ ಮುಂದೆ ಸಾಗಿತು.
  7. ಉರುಳು; ಗಾಲಿಗಳ ಮೇಲೋ ಎಂಬಂತೆ ಸಾಗು, ಮುಂದುವರಿ: the years rolled by ವರ್ಷಗಳು ಉರುಳಿದುವು.
  8. (ವ್ಯಕ್ತಿ) ವಾಹನದಲ್ಲಿ ಮುಂದೆ ಸಾಗಿಸಲ್ಪಡು, ಮುಂದೆ ಹೋಗು: he rolled past in his carriage ನಮ್ಮನ್ನು ಹಾದು ಅವನು ತನ್ನ ವಾಹನದಲ್ಲಿ ಮುಂದೆ ಹೋದನು.
  9. ತಾನೇ ಒಂದು ಆಕಾರಕ್ಕೆ ಬರು; ಸ್ವತಃ ಆಕಾರ ತಾಳು: the hedgehog rolled into a ball ಮುಳ್ಳುಹಂದಿಯು ತಂತಾನೆ ಚೆಂಡಿನಂತೆ ಮುದುರಿಕೊಂಡಿತು.
  10. ಉಂಡೆಯಾಗು; ಬೆಳೆಯುತ್ತ ಹೋಗು; ರಾಶಿಗೂಡು; ಏರು; ಹೆಚ್ಚಾಗು: the reckoning is rolling up ಲೆಕ್ಕ ಬೆಳೆಯುತ್ತಾ, ಹೋಗುತ್ತಿದೆ, ಏರುತ್ತಿದೆ.
  11. (ಅಶಿಷ್ಟ) ಶುರುಮಾಡು; ಮೊದಲುಮಾಡು; ಆರಂಭಿಸು: let’s roll at sunrise ಹೊತ್ತಾರೆ ಶುರುಮಾಡೋಣ.
  12. ಹರಡು; ಹರಡಿಕೊ: the paint rolls easily ಬಣ್ಣ ಸುಲಭವಾಗಿ ಹರಡಿಕೊಳ್ಳುತ್ತದೆ.
  13. (ಕಾರು ಮೊದಲಾದವುಗಳ ವಿಷಯದಲ್ಲಿ) ಪಲ್ಟಿಹೊಡೆ; ತಲೆಕೆಳಗಾಗು.
  14. (ಕುದುರೆ ಮೊದಲಾದವುಗಳ ವಿಷಯದಲ್ಲಿ) ಬೆನ್ನಿನ ಮೇಲೆ ಮಲಗಿ, ಮುಖ್ಯವಾಗಿ ಸವಾರನನ್ನು ಕೆಡವಲು, ಉರುಳಾಡು.
  15. (ಚಲಿಸುವ ಹಡಗು, ವಿಮಾನ ಯಾ ವಾಹನದ ವಿಷಯದಲ್ಲಿ) ಚಲಿಸುವ ದಿಕ್ಕಿಗೆ ಸಮಾಂತರವಾಗಿ ಹೊಯ್ದಾಡು, ಓಲಾಡು.
  16. ತೂರಾಡು; ತತ್ತರಿಸು; ತೂರಾಡುತ್ತಾ ಅಸ್ಥಿರವಾಗಿ ಹೆಜ್ಜೆಯಿಡು: they rolled out of the pub ಅವರು ಪಾನಗೃಹದಿಂದ ತೂರಾಡುತ್ತಾ ಹೊರಬಂದರು.
  17. (ಯಂತ್ರದ ವಿಷಯದಲ್ಲಿ) ಕೆಲಸಮಾಡಲು ಯಾ ಚಲಿಸಲು ಪ್ರಾರಂಭಿಸು: the train began to roll ರೈಲು ಚಲಿಸಲು ಪ್ರಾರಂಭಿಸಿತು.
ಪದಗುಚ್ಛ
  1. be rolling (ಆಡುಮಾತು) ಶ್ರೀಮಂತನಾ(ಳಾ)ಗಿರು.
  2. be rolling in (ಆಡುಮಾತು) (ಮುಖ್ಯವಾಗಿ ಹಣ) ಸಮೃದ್ಧಿಯಾಗಿರು; ಹೇರಳವಾಗಿರು.
  3. planets roll on their courses ಗ್ರಹಗಳು ತಮ್ಮ ಪಥಗಳಲ್ಲಿ ಉರುಳುತ್ತಾ ಸಾಗುತ್ತವೆ.
  4. rolled into one ಒಂದೇ ವ್ಯಕ್ತಿ ಯಾ ವಸ್ತುವಿನಲ್ಲಿ ಸೇರಿಸಿದ, ಸೇರಿದ: saint and philosopher rolled into one ಸಂತನೂ ದಾರ್ಶನಿಕನೂ ಒಬ್ಬನಲ್ಲೇ ಹುರಿಗೊಂಡು, ಸೇರಿಕೊಂಡು, ಏಕೀಭವಿಸಿ.
  5. roll in ಹೆಚ್ಚಿನ ಸಂಖ್ಯೆಯಲ್ಲಿ ಯಾ ಪ್ರಮಾಣದಲ್ಲಿ ಬರು.
  6. rolling stone gathers no $^1$moss.
  7. roll one over ಒಬ್ಬನನ್ನು ಉರುಳಬಿಡು; ಉರುಳಿಕೊಂಡು ಹೋಗುವಂತೆ ಮಾಡು.
  8. roll one’s rs ರಕಾರವನ್ನು ಹೊರಳಿಸಿ ಉಚ್ಚರಿಸು, ತಿರುವಿ ಹೇಳು.
  9. roll over
    1. ಒಬ್ಬನನ್ನು ನೆಲದ ಮೇಲೆ ಚಪ್ಪಟೆಯಾಗಿ ಬೀಳುವಂತೆ ಯಾ ಉರುಳುವಂತೆ ಮಾಡು.
    2. (ಅರ್ಥಶಾಸ್ತ್ರ) ಹೊಸ ಸ್ಟಾಕುಗಳನ್ನು, ಹುಂಡಿಗಳನ್ನು ಹೊರಡಿಸುವ ಮೂಲಕ ವಾಯಿದೆ ಮುಗಿದಿರುವ ಹುಂಡಿ ಮೊದಲಾದ ಪಾವತಿಗೆ ಹಣ ಒದಗಿಸು.
  10. roll up
    1. (ಸೈನ್ಯ) ಕಿರಿದಾಗುವಂತೆ, ಸುತ್ತುಕಟ್ಟುವಂತೆ, (ಶತ್ರುಸಾಲಿನ) ಪಾರ್ಶ್ವವನ್ನು ಮುದುರಿಸು, ಹೊರಳಿಸು.
    2. (ಆಡುಮಾತು) ಥಟ್ಟನೆ ಕಾಣಿಸಿಕೊ; ಮುಖತೋರಿಸು; ಪ್ರತ್ಯಕ್ಷವಾಗು.
    3. ಸುರುಳಿಯಾಗಿ ಸುತ್ತು.
    4. (ಆಡುಮಾತು) ವಾಹನದಲ್ಲಿಬರು; ಪ್ರತ್ಯಕ್ಷವಾಗು.
  11. smoke rolls up ಹೊಗೆ ಸುರುಳಿಸುರುಳಿಯಾಗಿ ಮೇಲಕ್ಕೆ ಏರುತ್ತದೆ.
  12. the mist rolled away ಮಂಜು ಕರಗಿಹೋಯಿತು.
  13. years roll on ವರ್ಷಗಳು ಸದ್ದಿಲ್ಲದೆ ಉರುಳಿಹೋಗುತ್ತವೆ.