See also 2roll
1roll ರೋಲ್‍
ನಾಮವಾಚಕ
  1. (ಕಾಗದ, ಬಟ್ಟೆ ಮೊದಲಾದವುಗಳಲ್ಲಿ ಸುತ್ತಿಸುತ್ತಿ ಮಾಡಿದ) ಉರುಳೆ; ಸುರುಳಿ: rolls of carpet ಜಮಖಾನದ ಸುರುಳಿಗಳು.
  2. (ಅಯೊನಿಕ್‍ ಯಾ ಗ್ರೀಕ್‍ ಬೋದಿಗೆ ಶೈಲಿಯಲ್ಲಿ) ಸುರುಳಿಯಲಂಕಾರ.
  3. ಸುರುಳಿಸುತ್ತಿದ ದಸ್ತೈವಜು, ಮುಖ್ಯವಾಗಿ ಸರ್ಕಾರದ ಪತ್ರ, ದಾಖಲೆ.
    1. ಪಟ್ಟಿ; ಯಾದಿ; ದಾಖಲೆ ಪುಸ್ತಕ: in the roll of saints ಸಂತರ ಪಟ್ಟಿಯಲ್ಲಿ.
    2. ಈ ಪಟ್ಟಿಯ ಒಟ್ಟು ಸಂಖ್ಯೆ.
  4. (ಅಧಿಕೃತವಾದ) ವಕೀಲರ, ನ್ಯಾಯವಾದಿಗಳ ಪಟ್ಟಿ, ಯಾದಿ: strike off the rolls (ಅಪ್ರಾಮಾಣಿಕತೆ ಮೊದಲಾದವಕ್ಕಾಗಿ) ಪಟ್ಟಿಯಿಂದ ಹೆಸರು ಹೊಡೆದು ಹಾಕು; ಯಾದಿಯಿಂದ ವಜಾಮಾಡು.
  5. (ಗೈರುಹಾಜರಿಯಾದವರನ್ನು ಪತ್ತೆ ಮಾಡಲು ಅನುಕೂಲಿಸುವ, ಸಿಪಾಯಿಗಳ ಯಾ ವಿದ್ಯಾರ್ಥಿಗಳ) ಹೆಸರು ಪಟ್ಟಿ: ಹಾಜರಿ ಯಾದಿ.
  6. ಸರಿಸುಮಾರು(ಅರ್ಧ) ಸುರುಳಿಯಾಕಾರದ; ಉರುಳೆಯಾಕಾರದ – ಉಂಡೆ, ಮುದ್ದೆ, ತೆಕ್ಕೆ, ಗೋಳ: a roll of butter ಬೆಣ್ಣೆಯ ಮುದ್ದೆ, ಉಂಡೆ.
  7. ಸುರುಳಿ; ಸಾಮಾನ್ಯವಾಗಿ ಉರುಳೆಯಾಕಾರದ ಸಣ್ಣ ರೊಟ್ಟಿ.
  8. (ವಾಸ್ತುಶಿಲ್ಪ) ಉರುಳೆಯಾಕೃತಿ, ದಿಂಡು; (ಹೊರ ಉಬ್ಬಿನ) ಗೋಲು.
  9. (ಒಂದು ವಸ್ತುವಿನ) ಹಿಮ್ಮಡಿಚಿದ ಅಂಚು (ಉದಾಹರಣೆಗೆ ಅಂಗಿಯ ಕತ್ತು ಪಟ್ಟಿ).
  10. (ಪುಸ್ತಕದ ರಟ್ಟುಕಟ್ಟುವಿಕೆ) ರಟ್ಟುಕಟ್ಟಿನ ಉರುಳೆ; ರಟ್ಟಿನ ಮೇಲೆ ಉರುಳಿಸಿ (ಉಬ್ಬುರೇಖೆಗಳು, ಗಿಲೀಟು ಮೊದಲಾದವನ್ನು) ಗುರುತುಮಾಡಲು ಉಪಯೋಗಿಸುವ, ಗಾಲಿಯಾಕಾರದ ಸಲಕರಣೆ.
  11. ಉರುಳೆ; ಲಟ್ಟಣಿಗೆ.
  12. (ಅಮೆರಿಕನ್‍ ಪ್ರಯೋಗ ಮತ್ತು ಆಸ್ಟ್ರೇಲಿಯ) ಹಣ; ಮುಖ್ಯವಾಗಿ ಸುರುಳಿಸುತ್ತಿದ (ಬ್ಯಾಂಕಿನ) ನೋಟುಗಳು.
  13. ಉರುಳಾಟ; ಹೊರಳಾಟ; ಉರುಳು(ವುದು); ಹೊರಳು(ವುದು); ತೂಗಾಟ: the roll of the ship ಹಡಗಿನ ತೂಗಾಟ.
  14. (ವಾಯುಯಾನ) ಉರುಳು; ವಿಮಾನವು ತನ್ನ ಉದ್ದುದ್ದದ ಅಕ್ಷದ ಸುತ್ತ ಪೂರ್ತಿ ಒಂದು ಸುತ್ತುತಿರುಗುವುದು.
  15. ಒಂದು ಸಲದ ತೂಗಾಟ, ಉರುಳಾಟ, ಹೊರಳಾಟ: a roll on the grass ಹುಲ್ಲಿನ ಮೇಲೆ ಒಂದು ಸಲದ ಉರುಳಾಟ.
  16. ತೂಗಾಡುವ, ತತ್ತರಿಕೆಯ – ನಡಗೆ.
  17. ಉರುಳು; ಉರುಳಾಟ; ದೇಹವನ್ನು ಬಗ್ಗಿಸಿ ಮುಂದಕ್ಕೆ ಯಾ ಹಿಂದಕ್ಕೆ ಉರುಳುವ ವ್ಯಾಯಾಮ.
  18. (ಆಡುಮಾತು)
    1. ಸಂಭೋಗ.
    2. ಕಾಮದ, ಸಂಭೋಗದ – ಲಲ್ಲೆ, ಮುದ್ದಾಟ: roll in the hay ಸಂಭೋಗದ, ಮುದ್ದಾಟದ ಒಂದು ಉರುಳು.
  19. ಒಂದೇಸಮನೆ ವೇಗವಾಗಿ ಹೊಡೆಯುವ ಭೇರಿಬಾಜಣೆ; ಮದ್ದಳೆಯನ್ನು ವೇಗವಾಗಿ, ರಭಸದಿಂದ ಬಾರಿಸುವುದು.
  20. (ಗುಡುಗಿನ, ಕೇಕೆಯ, ಗಟ್ಟಿಕೂಗಿನ) ಮೊಳಗು; ಮೊರೆತ; ನಾದ.
  21. (ಮಾತುಗಳ) ಪ್ರವಾಹ; ಧಾಟಿ; ಓಟ; ನಾದಪೂರ್ಣ ಹರಿವು.
ಪದಗುಚ್ಛ
  1. Master of the Rolls
    1. ಮೇಲುಮನವಿ ನ್ಯಾಯಸ್ಥಾನದ ನ್ಯಾಯಾಧೀಶ.
    2. ಸಾರ್ವಜನಿಕ ದಾಖಲೆಗಳ ಕಚೇರಿಯ ದಾಖಲೆಗಳನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವವನು; ದಾಖಲೆಗಳ ಅಧಿಕಾರಿ.
  2. on a roll (ಅಮೆರಿಕನ್‍ ಪ್ರಯೋಗ) (ಅಶಿಷ್ಟ)
    1. ಯಶಸ್ಸು ಯಾ ಪ್ರಗತಿಯನ್ನು ಅನುಭವಿಸುತ್ತ.
    2. ತೀವ್ರ ಚಟುವಟಿಕೆಗಳಲ್ಲಿ ತೊಡಗಿರುವ.
  3. roll of bread (ಮುಖ್ಯವಾಗಿ ಬೆಳಗಿನ ಉಪಾಹಾರಕ್ಕೆ ಮಾಡಿದ) ಉರುಳೆಯಾಕಾರದ ಸಣ್ಣರೊಟ್ಟಿ.
  4. roll of honour ಗೌರವ ಪಂಕ್ತಿ; ಮುಖ್ಯವಾಗಿ ಯುದ್ಧದಲ್ಲಿ ಮಡಿದ ವೀರರ ಶ್ರೇಣಿ.
  5. rolls of fat ಕೊಬ್ಬಿನ ಸುರುಳಿಗಳು.
  6. the Rolls (ಹಿಂದೆ) ದಾಖಲೆಗಳನ್ನಿಡುತ್ತಿದ್ದ ಕಟ್ಟಡ;(ಈಗ) ದಾಖಲೆ, ದಹ್ತರ – ಕಚೇರಿ.
  7. strike off the rolls ಅಪ್ರಾಮಾಣಿಕತೆ ಮೊದಲಾದ\ ಕಾರಣದಿಂದ ಮುಖ್ಯವಾಗಿ ಸಲಹೆವಕೀಲ(solicitor)ನನ್ನು ಕೆಲಸದಿಂದ ವಜಾಮಾಡು.