See also 2roar
1roar ರೋರ್‍
ಸಕರ್ಮಕ ಕ್ರಿಯಾಪದ
  1. (ಮಾತನ್ನು) ಗಟ್ಟಿಯಾಗಿ ಆಡು; ಅರಚು; (ಮೇಳಗೀತವನ್ನು) ಗಟ್ಟಿಯಾಗಿ ಹಾಡು; (ಆಣೆ ಪ್ರಮಾಣಗಳನ್ನು) ಗಟ್ಟಿಯಾಗಿ ಹೇಳು, ಘೋಷಿಸು.
  2. ಅರಚಿ ಅರಚಿ ಕಿವುಡುಮಾಡು, ಗಂಟಲು ಒಡೆದುಕೊ.
  3. ಅಬ್ಬರಿಸಿ ಅಡಗಿಸು, ಬಾಯಿಮುಚ್ಚಿಸು.
ಅಕರ್ಮಕ ಕ್ರಿಯಾಪದ
  1. ಗರ್ಜಿಸು; ಮೊಳಗು; ಮೊರೆ; ಭೋರ್ಗರೆ: lions roaring after their prey ಸಿಂಹಗಳು ತಮ್ಮ ಬೇಟೆಯನ್ನು ಅಟ್ಟಿಕೊಂಡು ಗರ್ಜಿಸುತ್ತಾ.
  2. ಅರಚು; ಅಬ್ಬರಿಸು; ಆರ್ಭಟಿಸು: you need not roar ನೀನು ಗಟ್ಟಿಯಾಗಿ ಕೂಗಿಕೊಳ್ಳಬೇಕಾಗಿಲ್ಲ, ಅಬ್ಬರಿಸಬೇಕಾಗಿಲ್ಲ.
  3. (ಕುದುರೆಯ ವಿಷಯದಲ್ಲಿ ರೋಗದಿಂದ) ಗೊರಗುಟ್ಟು; ಉಸಿರಾಟದಲ್ಲಿ ದೊಡ್ಡ ಸದ್ದುಮಾಡು.
  4. (ಸ್ಥಳದ ವಿಷಯದಲ್ಲಿ) ಗದ್ದಲವಾಗಿರು; ಗದ್ದಲ ಸೂಸುತ್ತಿರು; ಪ್ರತಿಧ್ವನಿಸು.
  5. ವಾಹನದಲ್ಲಿ ಬಹಳ ವೇಗದಲ್ಲಿ (ಮುಖ್ಯವಾಗಿ ಎಂಜಿನು ಶಬ್ದ ಮಾಡುವಂತೆ) ಭಾರಿ ಸದ್ದು ಮಾಡುತ್ತಾ ಹೋಗು, ಪ್ರಯಾಣ ಮಾಡು.