See also 2review
1review ರಿವ್ಯೂ
ನಾಮವಾಚಕ
  1. (ಮುಖ್ಯವಾಗಿ ನ್ಯಾಯಶಾಸ್ತ್ರ) ಮರುಪರೀಕ್ಷೆ; ಪುನರ್ವಿಮರ್ಶೆ; ಪುನಃ ಪರಿಶೀಲನೆ: is not subject to review ಪುನರ್ವಿಮರ್ಶೆಗೆ ಬದ್ಧವಲ್ಲ.
  2. (ಸೈನ್ಯದಳಗಳು, ನೌಕಾಬಲ ಮೊದಲಾದವುಗಳ) ವಿಧ್ಯುಕ್ತ ಪರಿಶೀಲನೆ; ಪರಿಶೀಲನೆ ಪ್ರದರ್ಶನ; ಪ್ರದರ್ಶನ ಮತ್ತು ಕ್ರಮಬದ್ಧ ಪರಿಶೀಲನೆ.
  3. ಹಿನ್ನೋಟ; ಸಿಂಹಾವಲೋಕನ; ಹಿಂದೆ ನಡೆದದ್ದನ್ನು, ಹಿಂದಿನದನ್ನು–ನೆನೆಯುವುದು, ವಿಮರ್ಶಿಸುವುದು.
  4. (ವಿಷಯದ ಯಾ ವಸ್ತುವಿನ) ಒಟ್ಟುನೋಟ; ಸ್ಥೂಲ ಸಮೀಕ್ಷೆ; ಸಾಮಾನ್ಯಾವಲೋಕನ; ಸಾಮಾನ್ಯ ಪರಿಶೀಲನೆ.
  5. (ಗ್ರಂಥ ಮೊದಲಾದವುಗಳ ಪ್ರಕಟಿತ) ವಿಮರ್ಶೆ; ಅವಲೋಕನ.
  6. (ಸಮಕಾಲೀನ ಸಂಗತಿಗಳು, ಹೊಸ ಪುಸ್ತಕಗಳು, ಕಲೆ ಮೊದಲಾದವುಗಳ ಮೇಲೆ ಲೇಖನಗಳಿರುವ) ನಿಯತಕಾಲಿಕ (ಪತ್ರಿಕೆ, ಪ್ರಕಟಣೆ).
  7. ಮರುನೋಟ; ಪುನರವಲೋಕನ; ಮರುಪರಿಶೀಲನೆ: is under review ಮರುಪರಿಶೀಲನೆಯಲ್ಲಿದೆ.
ಪದಗುಚ್ಛ
  1. court of review ಪುನರ್ವಿಮರ್ಶೆ ನ್ಯಾಯಾಲಯ; ಶಿಕ್ಷೆಯ ತೀರ್ಪು ಮೊದಲಾದವು ಮರುಪರಿಶೀಲನೆಗಾಗಿ ಬರುವ ನ್ಯಾಯಸ್ಥಾನ.
  2. pass in review (ರೂಪಕವಾಗಿ ಸಹ)
    1. ಪರೀಕ್ಷಿಸು; ಪರಿಶೀಲಿಸು.
    2. ಪರೀಕ್ಷಿಸಲ್ಪಡು; ಪರಿಶೀಲನೆಗೊಳಗಾಗು.
  3. review order
    1. (ಸಾಮಾನ್ಯವಾಗಿ ಪರಿಶೀಲನೆಯ ಸಂದರ್ಭಗಳಲ್ಲಿ) ದಳಗಳ–ಸಜ್ಜು, ವೇಷಭೂಷಣ ಮತ್ತು ರಚನಾಕ್ರಮ.
    2. (ರೂಪಕವಾಗಿ) ಪೂರ್ಣಸಜ್ಜು.