See also 1retreat
2retreat ರಿಟ್ರೀಟ್‍
ನಾಮವಾಚಕ
  1. (ಮುಖ್ಯವಾಗಿ ಸೈನ್ಯದ) ಹಿಮ್ಮೆಟ್ಟಿಕೆ; ಹಿಮ್ಮೆಟ್ಟುವುದು.
  2. (ಸೈನ್ಯ) ಹಿಮ್ಮೆಟ್ಟು ಸೂಚನೆ; ಹಿಂದಕ್ಕೆ ಹೋಗುವ ಸಂಕೇತ: sound the (or a) retreat ಹಿಮ್ಮೆಟ್ಟುವ ಸೂಚನೆ ಕೊಡು; ಹಿಂದಕ್ಕೆ ಹೋಗಬೇಕಾದುದನ್ನು ಸೂಚಿಸುವ ಧ್ವನಿ ಮಾಡು.
  3. (ಸೈನ್ಯ) ಸಂಜೆ ಕಹಳೆ, ತುತೂರಿ; ಸೂರ್ಯಾಸ್ತವನ್ನು ಸೂಚಿಸುವ ತುತೂರಿ ಕರೆ.
  4. ಏಕಾಂತ ಸ್ಥಾನಕ್ಕೆ ಯಾ ಸುರಕ್ಷಿತ ಸ್ಥಾನಕ್ಕೆ ಹೋಗಿ ಸೇರಿಕೊಳ್ಳುವುದು.
  5. ಏಕಾಂತಸ್ಥಳ; ವಿವಿಕ್ತಸ್ಥಾನ; ಮೂಲೆಗಾಡು.
  6. ಏಕಾಂತ; ವಿವಿಕ್ತತೆ; ಸಮಾಜ, ವ್ಯವಹಾರ, ವ್ಯಕ್ತಿ ಮೊದಲಾದವುಗಳಿಂದ ದೂರವಾಗುವುದು.
  7. (ಧಾರ್ಮಿಕ ಅನುಷ್ಠಾನ, ಧ್ಯಾನ ಮೊದಲಾದವುಗಳಿಗಾಗಿ ತಾತ್ಕಾಲಿಕವಾದ) ಏಕಾಂತವಾಸ (ಮಾಡುವುದು ಯಾ ಅದರ ಅವಧಿ).
  8. ಆಶ್ರಯಧಾಮ; ಆರೈಕೆ ಗೃಹ; ಆರೈಕೆ ಅಗತ್ಯವಾಗಿರುವ ವಿಶ್ರಾಂತಿವೇತನದಾರರು ಮೊದಲಾದವರನ್ನು ನೋಡಿಕೊಳ್ಳಲು ಸೇರಿಸಿ ಕೊಳ್ಳುವ ಸ್ಥಳ.
  9. ಗುಪ್ತಸ್ಥಾನ; ರಹಸ್ಯಸ್ಥಳ; ಮರೆಗೂಡು; ಅವಿತುಕೊಳ್ಳುವ ಜಾಗ.
  10. ಆಶ್ರಯಸ್ಥಾನ; ಸುರಕ್ಷಿತ ಸ್ಥಳ.
ಪದಗುಚ್ಛ
  1. beat a retreat
    1. (ಮುಖ್ಯವಾಗಿ ಆತುರಾತುರವಾಗಿ ಯಾ ಅವಮಾನಕರವಾದ ರೀತಿಯಲ್ಲಿ) ಹಿಂದೆಗೆ; ಹಿಮ್ಮೆಟ್ಟು.
    2. ಉದ್ಯಮವನ್ನು ಕೈಬಿಡು, ತೊರೆ, ತ್ಯಜಿಸು.
    3. (ಸೈನ್ಯ) ಹಿಮ್ಮೆಟ್ಟುವ ಸೂಚನೆಗೊಡು.
  2. make good one’s retreat ಸುರಕ್ಷಿತವಾಗಿ, ನಿರಪಾಯವಾಗಿ–ಹೊರಟುಹೋಗು, ಪಾರಾಗು.