See also 2retreat
1retreat ರಿಟ್ರೀಟ್‍
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಸೈನ್ಯ ಮೊದಲಾದವುಗಳ ವಿಷಯದಲ್ಲಿ)

  1. ಹಿಮ್ಮೆಟ್ಟು; ಹಿಂದಕ್ಕೆ ಸರಿ, ಹೋಗು; ನಿವರ್ತಿಸು; ಹಿಂದೆಗೆ; ಹಿಂಜರಿ; ಇದ್ದ ಸ್ಥಾನವನ್ನು ಬಿಡು.
  2. ಒಳಸರಿ; ಹಿಂದಕ್ಕೆ–ಓಲು, ಓರೆಯಾಗು: retreating chin ಒಳಸರಿಯುವ ಗಲ್ಲ. retreating forehead ಹಿಂದಕ್ಕೆ ಓಲಿರುವ ಹಣೆ.
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಚದುರಂಗದಲ್ಲಿ ಕಾಯನ್ನು ಮುಂದಿನ ಸ್ಥಾನದಿಂದ ಯಾ ಅಪಾಯದ ಸ್ಥಾನದಿಂದ) ಹಿಂದಕ್ಕಿಡು; ಹಿಂದಕ್ಕೆ ಸರಿಸು; ನಿವರ್ತಿಸು.