See also 2retard
1retard ರಿಟಾರ್ಡ್‍
ಸಕರ್ಮಕ ಕ್ರಿಯಾಪದ
  1. (ಪ್ರಗತಿ, ಬೆಳವಣಿಗೆ, ಆಗಮನ, ಸಮಾಪ್ತಿ, ಘಟನೆ, ಮೊದಲಾದವುಗಳನ್ನು) ವಿಲಂಬ ಮಾಡು; ಕುಂಠಿತಗೊಳಿಸು; ನಿಧಾನ, ತಡ, ಸಾವಕಾಶ–ಮಾಡು ಯಾ ಮಾಡಿಸು; ಹಿಂಬೀಳಿಸು.
  2. (ಮುಖ್ಯವಾಗಿ ಭೂತಕೃದಂತದಲ್ಲಿ) ಮಂದಬುದ್ಧಿಯ; (ಮಾನಸಿಕ ಯಾ ದೈಹಿಕ ಬೆಳವಣಿಗೆಯಲ್ಲಿ) ಹಿಂದೆ ಬಿದ್ದ; ಹಿಂದಾದ; ನಿಧಾನವಾದ: retarded child ಮಾನಸಿಕ ಬೆಳವಣಿಗೆ ಕುಂಠಿತವಾದ ಮಗು; ಮಾನಸಿಕವಾಗಿ ಹಿಂದುಳಿದ ಮಗು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಭೌತಿಕ ವಿಷಯಗಳು, ಉದಾಹರಣೆಗೆ ಉಬ್ಬರವಿಳಿತಗಳು, ಅಲೆಗಳು, ಆಕಾಶಕಾಯಗಳು ಮೊದಲಾದವು ಗೊತ್ತಾದ ಯಾ ಲೆಕ್ಕಹಾಕಿದ ಕಾಲಕ್ಕಿಂತ) ನಿಧಾನವಾಗು; ತಡವಾಗು; ಹಿಂಬೀಳು; ತಡೆದು, ಹಿಂದಾಗಿ, ಹೊತ್ತುಮೀರಿ–ಬರು, ಆಗು.