See also 2result
1result ರಿಸಲ್ಟ್‍
ಅಕರ್ಮಕ ಕ್ರಿಯಾಪದ
  1. (ಪರಿಸ್ಥಿತಿ, ಸಂದರ್ಭ, ಕಾರಣ ಮೊದಲಾದವುಗಳಿಂದ) ಪರಿಣಮಿಸು; ಉಂಟಾಗು; ಆಗು; ಒದಗು; ಹುಟ್ಟಿಬರು; ಉದ್ಭವಿಸು; ಸಂಭವಿಸು; ಫಲಿಸು: an injury resulting from a fall ಬಿದ್ದದ್ದರಿಂದ ಉಂಟಾದ ಗಾಯ.
  2. (ತರ್ಕಶಾಸ್ತ್ರ) (ಪ್ರತಿಜ್ಞೆಯಿಂದ, ಪ್ರತಿಜ್ಞಾವಾಕ್ಯದಿಂದ, ನಿರ್ಣಯರೂಪದಲ್ಲಿ) ಹೊರಪಡು; ಉದ್ಭವಿಸು; ಪರಿಣಮಿಸು; ಸಿದ್ಧಿಸು; ಫಲಿತವಾಗಿ ಬರು: the conclusion results from the premises ಪ್ರತಿಜ್ಞಾವಾಕ್ಯಗಳಿಂದ ಈ ನಿರ್ಣಯವು ಯಾ ತೀರ್ಮಾನವು ಉದ್ಭವಿಸುತ್ತದೆ.
  3. ಕೊನೆಗೊಳ್ಳು; ಅವಸಾನಗೊಳ್ಳು; ಅಂತ್ಯವಾಗು; ಪರಿಣಮಿಸು; ಪರಿಣಾಮವಾಗು; ಪರ್ಯವಸಾನ ಹೊಂದು: the whole effort resulted in utter failure ಇಡೀ ಪ್ರಯತ್ನ ಸೋಲಿನಲ್ಲಿ ಕೊನೆಗೊಂಡಿತು, ಪರಿಣಮಿಸಿತು. the transcation resulted in a loss ಆ ವ್ಯಾಪಾರವು ನಷ್ಟದಲ್ಲಿ ಪರ್ಯವಸಾನವಾಯಿತು.