See also 1resort
2resort ರಿಸಾರ್ಟ್‍
ನಾಮವಾಚಕ
  1. ಆಶ್ರಯ; ಅವಲಂಬನ; ನೆರವಿಗಾಗಿ ಯಾ ಅನುಕೂಲಕ್ಕಾಗಿ ಮರೆ ಹೊಕ್ಕ ವಸ್ತು, ಸಾಧನ ಯಾ ಉಪಾಯ: a taxi was the only resort ಟ್ಯಾಕ್ಸಿಯೊಂದೇ ನಮಗಿದ್ದ ಸಾಧನ.
  2. (ಯಾವುದೇ ಉದ್ದೇಶಕ್ಕಾಗಿ) ಅವಲಂಬಿಸಬೇಕಾಗುವ–ವಿಧಾನ, ಉಪಾಯ, ಹಾದಿ, ಮಾರ್ಗ: the only resort ಏಕೈಕ ವಿಧಾನ; ಅನನ್ಯೋಪಾಯ.
  3. ಮೇಲಿಂದ ಮೇಲೆ, ಭಾರೀ ಸಂಖ್ಯೆಯಲ್ಲಿ ಬಂದು ಹೋಗುತ್ತಿರುವುದು: a place of great resort ಜನಸಮೂಹ ಮೇಲಿಂದ ಮೇಲೆ ಬಂದು ಹೋಗುವ ಸ್ಥಳ.
  4. (ಯಾವುದೇ ನಿರ್ದಿಷ್ಟ ಪ್ರಯೋಜನಕ್ಕಾಗಿ, ಮುಖ್ಯವಾಗಿ ರಜಾದಿನಗಳಲ್ಲಿ) ಜನ ಬಂದುಹೋಗುವ ಸ್ಥಳ; ಧಾಮ: health resort ಆರೋಗ್ಯಧಾಮ. mountain resort ಗಿರಿಧಾಮ.
ಪದಗುಚ್ಛ
  1. as a last resort ಅಂತಿಮೋಪಾಯವಾಗಿ; ಬೇರೆ ಎಲ್ಲಾ ವಿಧಾನಗಳೂ ವಿಫಲವಾದ ಮೇಲೆ ಕೊನೆಯದಾಗಿ.
  2. in the last resort = ಪದಗುಚ್ಛ \((1)\).